ಲಂಡನ್ ಸೆಂಟರ್ ಕೋರ್ಟ್‌ನಲ್ಲಿ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಇಟಲಿಯ ಜಾನಿಕ್ ಸಿನ್ನರ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಾನಿಕ್ ಸಿನ್ನರ್ ಇತಿಹಾಸ ನಿರ್ಮಿಸಿದರು. ಈ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಇಟಲಿಯ ಆಟಗಾರ ಎಂಬ ಖ್ಯಾತಿಗೆ ಇವರು ಪಾತ್ರರಾದರು. ರೋಚಕ ಕಾದಾಟದಲ್ಲಿ ಸ್ಟಾರ್ ಆಟಗಾರ ಸ್ಪೇನ್ ಕಾರ್ಲೊಸ್ ಅಲ್ಕರಾಜ್ ನಿರಾಸೆ ಅನುಭವಿಸಿದರು.
ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮಖದಲ್ಲಿ ಇಟಲಿಯ ಜಾನಿಕ್ ಸಿನ್ನರ್ ತಮ್ಮ ನೈಜ್ಯ ಆಟವನ್ನು ಆಡಿದರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಇಟಲಿಯ ಆಟಗಾರ 4-6, 6-4, 6-4, 6-4ರಿಂದ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಅಲ್ಕರಾಜ್ ಅವರನ್ನು ಸೋಲಿಸಿದರು. 3 ಗಂಟೆ 4 ನಿಮಿಷ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸಿನ್ನರ್ ಅಬ್ಬರಿಸಿದರು. ಈ ಮೂಲಕ ಸಿನ್ನರ್ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್‌ಗೆ ಮುತ್ತಿಟ್ಟರು.

ಜಿದ್ದಾಜಿದ್ದಿನ ಕಾದಾಟದಲ್ಲಿ ಜಾನಿಕ್ ಸಿನ್ನರ್ ಅಮೋಘ ಪ್ರದರ್ಶನ ನೀಡಿದರು. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಅಲ್ಕರಾಜ್ ಅವರ ಕೈ ಮೇಲಿತ್ತು. ಆದರೆ ಜಾನಿಕ್ ಸಿನ್ನರ್ ಒತ್ತಡವನ್ನು ತೆಗೆದುಕೊಳ್ಳದೇ ಸ್ಥಿರ ಪ್ರದರ್ಶನವನ್ನು ನೀಡಿದರು. ಸಿನ್ನರ್ ಫೈನಲ್ ಪಂದ್ಯದುಕ್ಕೂ ಎಲ್ಲೂ ತಮ್ಮ ಸ್ಥಿರತೆ ಕಳೆದುಕೊಳ್ಳಲಿಲ್ಲ. ಅಲ್ಲದೆ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಸಿನ್ನರ್ ಮುಂದಿನ ಮೂರು ಸೆಟ್‌ಗಳಲ್ಲಿ ನೈಜ್ಯ ಆಟವನ್ನು ಆಡಿದರು.
ಜಾನಿಕ್ ಸಿನ್ನರ್ ಸೆಮಿಫೈನಲ್ ಕಾದಾಟದಲ್ಲಿ 24 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಸರ್ಬಿಯಾದ ನೋವಾಕ್ ಜೋಕೊವಿಚ್ ಅವರನ್ನು ಮೂರು ನೇರ ಸೆಟ್‌ಗಳಲ್ಲಿ ಮಣಿಸಿದ್ದರು. ಇದೇ ಆತ್ಮವಿಶ್ವಾಸದಿಂದ ಸಿನ್ನರ್ ಫೈನಲ್ ಪಂದ್ಯದಲ್ಲಿ ಮೈದಾನಕ್ಕೆ ಇಳಿದರು. ಈ ಪಂದ್ಯದಲ್ಲಿ ಸಿನ್ನರ್ ವೇಗದ ಸರ್ವ್‌ಗಳನ್ನು ಮಾಡದೇ ಇದ್ದರೂ, ಪರ್ಫೆಕ್ಶನ್‌ನಿಂದ ಅಂಕಗಳನ್ನು ಕಲೆ ಹಾಕುವಲ್ಲಿ ಸಫಲರಾದರು. ಇವರು ಒಂದೇ ಒಂದೇ ಸೆಟ್ ಗೆಲ್ಲುತ್ತಾ ಸಾಗಿದಂತೆ, ವಿಂಬಲ್ಡನ್ ಚಾಂಪಿಯನ್ ಪಟ್ಟ ಹತ್ತಿರ ಬರುತ್ತಾ ಸಾಗಿತ್ತು.

ಫ್ರೆಂಚ್ ಓಪನ್ 2025ರ ಫೈನಲ್‌ನ ಕೊನೆಯ ಎರಡು ಸೆಟ್‌ಗಳಲ್ಲಿ ಮಾಡಿದ ತಪ್ಪನ್ನು ಇಟಲಿಯ ಪ್ಲೇಯರ್ ವಿಂಬಲ್ಡನ್ ಫೈನಲ್ ಮಾಡಲಿಲ್ಲ. ಫೈನಲ್ ಪಂದ್ಯದಲ್ಲಿ ಅಮೋಘ ಫೋರ್ ಹ್ಯಾಂಡ್, ಬ್ಯಾಂಕ್ ಹ್ಯಾಂಡ್ ಶಾಟ್‌ಗಳನ್ನು ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡರು. ಈ ಮೂಲಕ ಪಂದ್ಯವನ್ನು ಗೆದ್ದು ಬೀಗಿದರು. ಇದಕ್ಕೂ ಮೊದಲು ಸ್ಪೇನ್ ಕಾರ್ಲೋಸ್ ಅಲ್ಕರಾಜ್ ವಿರುದ್ದ ಸಿನ್ನರ್ ಕಣಕ್ಕೆ ಇಳಿದಾಗ 5 ಬಾರಿ ಜಯ ಸಾಧಿಸಿದ್ದರು. ಇದೇ ಮೊದಲ ಬಾರಿಗೆ ಸಿನ್ನರ್ ಮಹತ್ವದ ಟೂರ್ನಿಯಲ್ಲಿ ಜಯು ಸಾಧಿಸಿ ಬೀಗಿದರು.