Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Wimbledon ಮೈದಾನದಲ್ಲಿ ಭಾರತದ ಕಂಪು; ಟೆನಿಸ್ ತಾರೆಯರ ಮನಗೆದ್ದ ಟವೆಲ್‌ಗಳು!

ಮಹಿಳೆಯ ಸಿಂಗಲ್ಸ್‌ನಲ್ಲಿ ಸ್ಟಾರ್ ಆಟಗಾರ್ತಿ ಲಿಂಡಾ ನೊಸ್ಕೋವಾ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ ಜಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ದೂರದ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವರ್ಷದ ಮೂರನೇ ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿಗೆ ಭಾರತಕ್ಕೆ ಸಂಬಂಧವಿದೆ. ಇತ್ತೀಚಿನ ವರ್ಷಗಳಲ್ಲಿ ಈ ಟೂರ್ನಿಯ ಗಮನ ಸೆಳೆದಿದ್ದು, ಆಟಗಾರರು ಬಳಸುವ ಟವೆಲ್‌ಗಳು.

ಸಾಮಾನ್ಯವಾಗಿ ಸ್ಟಾರ್ ಆಟಗಾರರು ಬಳಸುವ ರಾಕೆಟ್‌, ಕ್ಯಾಪ್‌ಗಳನ್ನು ಅಭಿಮಾನಿಗಳು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಸ್ತುಗಳ ಜೊತೆಗೆ ಅಭಿಮಾನಿಗಳ ಚಿತ್ತ ಅವರು ಬಳಿಸುವ ಟಾವೆಲ್‌ಗಳತ್ತ ನೆಟ್ಟಿದೆ.

Wimbledon

ವಿಂಬಲ್ಡನ್‌ನಲ್ಲಿ ಬಳಸಲಾಗುವ ಟವೆಲ್‌ಗಳು ಭಾರತೀಯ ಮೂಲದ್ದಾಗಿವೆ. ಮೇಡ್‌ ಇನ್ ಇಂಡಿಯಾ ಖ್ಯಾತಿಯ ಪರಿಮಳವನ್ನು ಇಂಗ್ಲೆಂಡ್‌ನಲ್ಲಿ ಪಸರಿಸುತ್ತಿವೆ. ಆರಂಭದಲ್ಲಿ ಈ ಟವೆಲ್‌ಗಳನ್ನು ಕ್ರಿಸ್ಟಿ ಎಂಬ ಬ್ರ್ಯಾಂಡ್‌ ಬ್ರಿಟನ್‌ನಲ್ಲಿ ತಯಾರಿಸುತಿತ್ತು. ಆದರೆ ಕಳೆದ 15 ವರ್ಷದ ಹಿಂದೆ ಭಾರತೀಯ ಜವಳಿಯ ದೈತ್ಯ ಕಂಪನಿ ವೆಲ್ಸ್‌ಟನ್‌ ಈ ಬ್ರಾಂಡ್‌ ಅನ್ನು ಸ್ವಾಧಿನ ಪಡಿಸಿಕೊಂಡಿತು. ಬಳಿಕ ಕ್ರಮೇಣ ಇದರ ಉತ್ಪಾದೆಯನ್ನು ಭಾರತಕ್ಕೆ ಶಿಫ್ಟ್ ಮಾಡಲಾಯಿತು.

ವಿಂಬಲ್ಡನ್‌ನಲ್ಲಿ ಬಳಸಲಾಗುವ ಟವೆಲ್‌ಗಳಿಗೆ ಬಹು ಬೇಡಿಕೆ ಸ್ಟಾರ್ ಆಟಗಾರರು ಇವುಗಳನ್ನು ತಮ್ಮ ಜೊತೆಗೆ ಒಯ್ಯುವುದನ್ನು ನೋಡಿರಬಹುದು. ಇನ್ನು ಈ ಟವೆಲ್‌ಗಳು ಸುಮಾರು 18 ತಿಂಗಳಿಗೂ ಮುನ್ನವೇ ತಯಾರಾಗುತ್ತವೆ. ಈ ಟವೆಲ್‌ಗಳ ಬಣ್ಣ ಹಾಗೂ ವಿನ್ಯಾಸದ ಮೇಲೆ ತಂಡ ಕೆಲಸ ಮಾಡುತ್ತದೆ. ಆಟಗಾರರು ಬಳಸುವ ಒಂದು ಟವೇಲ್‌ ಉತ್ಪಾದನೆಗೆ ಸರಿ ಸುಮಾರು ಏಳು ದಿನ ಬೇಕಾಗುತ್ತದೆ.

ಟವೆಲ್‌ಗಳನ್ನು ಮಾಡುವುದು ಹೇಗೆ?

ಟವೆಲ್‌ಗಳನ್ನು ಪ್ರೀಮಿಯಂ ಹತ್ತಿಯಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ ಶಾರ್ಟ್-ಲೂಪ್ ಟೆರ್ರಿ ನೇಯ್ಗೆ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಿಂದ ಈ ಟವೇಲ್‌ಗಳು ಹೆಚ್ಚು ನೀರು ಹೀರಿಕೊಳ್ಳುವ, ಬೇಗ ಒಣಗಿಸುವ ಹಾಗೂ ಮೃದುವಾಗಿರುತ್ತವೆ.

ಆಟಗಾರರ ನೆಚ್ಚಿನ ಆಯ್ಕೆ

ಸಾಮಾನ್ಯವಾಗಿ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಮೈದಾನದಲ್ಲಿ ಬಳಸಲು ಈ ಟವೆಲ್‌ಗಳನ್ನು ನೀಡಲಾಗುತ್ತದೆ. ಅಲ್ಲದೆ ಬಳಿಕ ಆಟಗಾರರು ಇವುಗಳನ್ನು ಹಿಂತಿರುಗಿಸಬೇಕಾಗುತ್ತದೆ. ಆದರೆ ಈ ಟವೆಲ್‌ಗಳ ಗುಣಮಟ್ಟಕ್ಕೆ ಮಾರು ಹೋಗಿರುವ ಆಟಗಾರರು ಇವುಗಳನ್ನು ತಮ್ಮ ಜೊತೆಗೆ ಕೊಂಡೊಯುತ್ತಾರೆ.

Story first published: Monday, July 13, 2026, 23:59 [IST]
Other articles published on Jul 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+