ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಜಪಾನ್‌ ಬಲಿಷ್ಠೆ ನವೋಮಿ ಒಸಾಕಾಗೆ ಸೋಲು

Tokyo Olympics 2020: Marketa Vondrousova beat Naomi Osaka in third round

ಟೋಕಿಯೋ: ಜಪಾನ್‌ನ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ಟೆನಿಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋತಿದ್ದಾರೆ. ಝೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ ಒಸಾಕಾ ನೇರಸೆಟ್ ಸೋಲು ಕಂಡಿದ್ದಾರೆ.

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಭಾರತದ ಅಪ್‌ಡೇಟೆಡ್ ತಂಡ ಪ್ರಕಟ, ತಂಡದಲ್ಲಿ ಪ್ರಮುಖ ಬದಲಾವಣೆ!

ಮಂಗಳವಾರ (ಜುಲೈ 027) ನಡೆದ ಪಂದ್ಯದಲ್ಲಿ ನವೋಮಿ ಒಸಾಕಾ ಅವರು ಮಾರ್ಕೆಟಾ ವೊಂಡ್ರೊಸೊವಾ ಎದುರು 1-6, 4-6ರ ಸೋಲನುಭವಿಸಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆತಿಥೇಯ ದೇಶಕ್ಕೆ ಬಂಗಾರ ಗೆಲ್ಲುವ ಒಸಾಕಾ ಕನಸು ಭಗ್ನವಾಗಿದೆ.

ಅರಿಯಕೆ ಟೆನಿಸ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಒಸಾಕ ಹಲವಾರು ತಪ್ಪುಗಳನ್ನು ಮಾಡಿ ಪಂದ್ಯ ಕಳೆದುಕೊಂಡಿದ್ದಾರೆ. ವಿಶ್ವ ನಂ.2 ಆಟಗಾರ್ತಿ ಒಸಾಕ ಅವರು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ ಆರಂಭೋತ್ಸವದ ವೇಳೆ ಕ್ರೀಡಾ ಜ್ಯೋತಿಗೆ ಅಗ್ನಿ ಸ್ಪರ್ಶಿಸಿ ಜಾಗತಿಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದ್ದರು.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

2019ರ ಫ್ರೆಂಚ್ ಓಪನ್‌ ನಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ವೊಂಡ್ರೊಸೊವಾ ಅವರು ಒಸಾಕಾಗಿಂತ ಹೆಚ್ಚು ಆತ್ಮವಿಶ್ವಾಸದ ಆಟವಾಡಿ ಫಲಿತಾಂಶ ತನ್ನದಾಗಿಸಿಕೊಂಡಿದ್ದಾರೆ.

Story first published: Tuesday, July 27, 2021, 12:43 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X