Tokyo Olympics: ಡೇನಿಲ್ ಮೆಡ್ವೆಡೆವ್‌ಗೆ ಶರಣಾದ ಸುಮಿತ್ ನಗಾಲ್

ಟೋಕಿಯೋ: ಪುರುಷರ ಟೆನಿಸ್ ಸಿಂಗಲ್ಸ್ ನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತದ ಸುಮಿತ್ ನಗಾಲ್ ಪರಾಭವಗೊಂಡಿದ್ದಾರೆ. ವಿಶ್ವ ನಂ.2ನೇ ಶ್ರೇಯಾಂಕಿತ ರಷ್ಯಾದ ಡೇನಿಲ್ ಮೆಡ್ವೆಡೆವ್ ವಿರುದ್ಧ ನಗಾಲ್ 6-2, 6-1ರ ಸೋಲು ಕಂಡಿದ್ದಾರೆ.
ಸೋಮವಾರ (ಜುಲೈ 26) ನಡೆದ ಪುರುಷರ ಸಿಂಗಲ್ಸ್ ದ್ವಿತೀಯ ಪಂದ್ಯದಲ್ಲಿ ಡೇನಿಲ್ ಮೆಡ್ವೆಡೆವ್ ವಿರುದ್ಧ ಸುಮಿತ್ ನಗಾಲ್ 6-2, 6-1ರ ನೇರಸೆಟ್ ಸೋಲನುಭವಿಸಿದ್ದಾರೆ. ಈ ಸೋಲಿನೊಂದಿಗೆ ಭಾರತದ ಟೆನಿಸ್ ಸ್ಪರ್ಧೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊನೆಗೊಂಡಿದೆ.
ನಗಾಲ್ ಮತ್ತು ಮೆಡ್ವೆಡೆವ್ ಮಧ್ಯೆ 66 ನಿಮಿಷಗಳ ಕದನ ನಡೆಯಿತು. 160ನೇ ಶ್ರೇಯಾಂಕಿತ ನಗಾಲ್ ಪ್ರತಿರೋಧ ವಿಶ್ವ ಶ್ರೇಷ್ಠ ಆಟಗಾರ ಮೆಡ್ವೆಡೆವ್‌ಗೆ ಯಾವ ಮೂಲೆಗೂ ಸಾಲಲಿಲ್ಲ. ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿರುವ ಮೆಡ್ವೆಡೆವ್ ತೃತೀಯ ಸುತ್ತಿಗೆ ಸುಲಭ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
26 ಜುಲೈ 1 PMವರೆಗೆ ಭಾರತದ ಪದಕ ಖಾತೆಯಲ್ಲಿ ಕೇವಲ 1 ಪದಕವಿತ್ತು. ಅದು ಜುಲೈ 24ರಂದು ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಸಿಕ್ಕ ಬೆಳ್ಳಿ ಪದಕ ಮಾತ್ರ. ಪದಕ ಪಟ್ಟಿಯಲ್ಲಿ ಭಾರತ 25ನೇ ಸ್ಥಾನದಲ್ಲಿದೆ. ಚೀನಾ ಮೊದಲನೇ ಸ್ಥಾನ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications