ಯುಎಸ್ ಓಪನ್ ಗೆದ್ದು ಇತಿಹಾಸ ಬರೆದ ಬ್ರಿಟನ್‌ನ ಎಮ್ಮಾ ರಡುಕಾನು

ನ್ಯೂಯಾರ್ಕ್, ಸೆಪ್ಟೆಂಬರ್ 12: ಈ ಬಾರಿಯ ಮಹಿಳೆಯರ ಸಿಂಗಲ್ಸ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಬ್ರಿಟನ್‌ನ 18ರ ಹರೆಯದ ಎಮ್ಮಾ ರಡುಕಾನು ಮುಡಿಗೇರಿದೆ. ಈ ಮೂಲಕ 44 ವರ್ಷಗಳ ನಂತರ ಬ್ರಿಟನ್‌ನ ಆಟಗಾರ್ತಿಯೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಇದು ಕ್ವಾಲಿಫಯರ್‌ನಲ್ಲಿ ಗೆದ್ದು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ಮೊದಲ ದೃಷ್ಟಾಂತ ಎಂಬುದು ಗಮನಾರ್ಹ ಸಂಗತಿ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಎಮ್ಮಾ ರಡುಕಾನುಗೆ ಕೆನಡಾದ ಆಟಗಾರ್ತಿ ಲೇಲಾ ಫೆರ್ನಾಂಡೀಸ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ರಡುಕಾನು 6-4, 6-3 ಅಂತರದಿಂದ ನೇರ ಸೆಟ್‌ಗಳ ಗೆಲುವು ಸಾಧಿಸಿದ್ದರು. ಇನ್ನು ಈ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವ ಮೂಲಕ 2004ರಲ್ಲಿ ಮರಿಯಾ ಶರಪೋವಾ ವಿಂಬಲ್ಡನ್ ಗೆದ್ದ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ರಡುಕಾನು ಪಾತ್ರರಾಗಿದ್ದಾರೆ.
ಮತ್ತೊಂದು ಕಿತೂಹಲಕಾರಿ ಸಂಗತಿಯೆಂದರೆ ಯುಎಸ್ ಓಪನ್ 2021ರ ಫೈನಲ್ ಹಂತಕ್ಕೇರಿದ ಮಹಿಳೆಯ ಸಿಂಗಲ್ಸ್ ವಿಭಾಗದ ಇಬ್ಬರು ಸ್ಒರ್ಧಿಗಳು ಕೂಡ ಹದಿಹರೆಯದ ಆಟಗಾರ್ತಿಯರಾಗಿದ್ದಾರೆ. ಇಬ್ಬರು ಕೂಡ ಮೊದಲ ಬಾರಿಗೆ ಯುಎಸ್ ಓಪನ್‌ನ ಫೈನಲ್ ಹಂತಕ್ಕೇರಿದ್ದಾರೆ.
ಎಮ್ಮಾ ರಡುಕಾನು ನಿರ್ಣಾಯಕ ಹಂತದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಮೂಲಕ ಅದ್ಭುತವಾಗಿ ಜಯ ಸಾಧಿಸಿದರು. ಬ್ರಿಟನ್‌ನ ಈ ಹದಿಕರೆಯದ ಆಟಗಾರ್ತಿ 150ನೇ ಶ್ರೇಯಾಂಕಿತೆಯಾಗಿ ಯುಎಸ್ ಓಪಲ್‌ನ ಸ್ಪರ್ಧೆಗೆ ಇಳಿದಿದ್ದ ಕಾರಣ ಯಾರು ಕೂಡ ಈಗೆ ಪ್ರಶಸ್ತಿ ಗೆಲ್ಲುವ ಸಾಧ್ಯತೆಯನ್ನು ಊಹಿಸಿರಲಿಲ್ಲ. ತನ್ನ ಕೇವಲ ಎರಡನೇ ಗ್ರ್ಯಾಂಡ್‌ಸ್ಲ್ಯಾಮ್‌ನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ 3 ಅರ್ಹತಾ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮುಖ್ಯ ಹಂತಕ್ಕೆ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಅಂತಿಮವಾಗಿ ಎಮ್ಮಾ ರೆಡುಕಾನು ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications