US Open 2023: ಆಂಡಿ ಮರ್ರೆ ಔಟ್, ಜ್ವರೇವ್, ಸಬಲೆಂಕಾ, ಸಿನ್ನರ್ ಮುಂದಿನ ಸುತ್ತಿಗೆ ಲಗ್ಗೆ
ಮೂರು ಬಾರಿಯ ಗ್ರ್ಯಾಂಡ್ಸ್ಲ್ಯಾಮ್ ಚಾಂಪಿಯನ್ ಆಂಡಿ ಮರ್ರೆ ಯುಎಸ್ ಓಪನ್ 2023ರ ಆವೃತ್ತಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆಯಲು ವಿಫಲವಾಗಿದ್ದಾರೆ. ಗ್ರಿಗರ್ ಡಿಮಿಟ್ರೋವ್ ವಿರುದ್ಧ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅನುಭವಿ ಆಟಗಾರ 3-6, 4-6, 1-6 ನೇರ ಸೆಟ್ಗಳ ಅಂತರದಿಂದ ಸೋಲು ಕಂಡಿದ್ದಾರೆ. ಎರಡು ಗಂಟೆ 46 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಬಲ್ಗೇರಿಯನ್ ಆಟಗಾರ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಈ ಸೆಣೆಸಾಟದಲ್ಲಿ ಮರ್ರೆ 45 ಅನಗತ್ಯ ತಪ್ಪುಗಳನ್ನು ಎಸಗಿದ್ದರು. ಇದು ತನ್ನ ಎದುರಾಆಳಿಗಿಂತ 11 ಹೆಚ್ಚಾಗಿತ್ತು. ಇದುವೇ ಸೋಲಿಗೆ ಪ್ರಮುಖ ಕಾರಣವೆನಿಸಿತ್ತು. ಅತ್ತ ಡೆಮಿಟ್ರೋವ್ 32 ವಿನ್ನರ್ಗಳನ್ನು ಬಾರಿಸಿ ಮೇಲುಗೈ ಸಾಧಿಸಿದ್ದರು. ಡೆಮಿಟ್ರೋವ್ಗೆ ಮುಂದಿನ ಸುತ್ತಿನಲ್ಲಿ ಅಲೆಕ್ಸಾಂಡರ್ ಜ್ವರೇವ್ ಎದುರಾಳೀಯಾಗಲಿದ್ದಾರೆ.

ಇತ್ತ ಅಲೆಕ್ಸಾಂಡರ್ ಜ್ವೆರೆವ್ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ತನ್ನ ಜರ್ಮನ್ ಎದುರಾಳಿ ಡೇನಿಯಲ್ ಆಲ್ಟ್ಮೇಯರ್ ವಿರುದ್ಧ ಬಹಳ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಮೂರು ಗಂಟೆ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 7-6 (7-1), 3-6, 6-4, 6-3 ಸೆಟ್ಗಳಿಂದ ಗೆದ್ದು ಬೀಗಿಗುವ ಮೂಲಕ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಈ ಮುಖಾಮುಖಿಯಲ್ಲಿ ಜ್ವೆರೆವ್ 52 ಬಲವಂತದ ತಪ್ಪುಗಳನ್ನು ಮಾಡಿದರು. ಇದು ಎದುರಾಳಿ ಡೇನಿಯಲ್ ಆಲ್ಟ್ಮೇಯರ್ ಅವರಿಗಿಂತ ಮೂರು ಹೆಚ್ಚು. ಆದರೆ ಅವರು 48 ವಿನ್ನರ್ಗಳನ್ನು ಬಾರಿಸುವ ಮೂಲಕ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದರು. ಹೀಗಾಗಿ ಎದುರಾಳೀಗೆ ಅವಕಾಶವನ್ನು ನೀಡಲೇ ಇಲ್ಲ. 2020ರಲ್ಲಿ ಯುಎಸ್ ಓಪನ್ ರನ್ನರ್ ಅಪ್ ಆಗಿರುವ ಜ್ವರೇಚ್ ಈ ಮೂಲಕ ಚಾಂಪಿಯನ್ ಕಿರೀಟಕದತ್ತ ಚಿತ್ತ ನೆಟ್ಟಿರುವುದು ಸ್ಪಷ್ಟವಾಗಿದೆ.
ಮತ್ತೊಂದೆಡೆ ಲೂಯಿಸ್ ಆರ್ಮ್ಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಲಾರಸ್ನ ಅರೀನಾ ಸಬಲೆಂಕಾ ಅವರು ಜೋಡಿ ಬರ್ರೇಜ್ ಮಣಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. 6-3, 6-2 ಅಂತರದಿಂದ ನೇರ ಸೆಟ್ಗಳಿಂದ ಗೆದ್ದ ಅಸಲೆಂಕಾ ಒಂದು ಗಂಟೆ 14 ನಿಮಿಷಗಳಲ್ಲಿ ಪಂದ್ಯವನ್ನು ಮುಗಿಸಿದ್ದರು.
ಇನ್ನು ವಿಶ್ವದ ಆರನೇ ಶ್ರೇಯಾಂಕದ ಆಟಗಾರ ಜಾನಿಕ್ ಸಿನ್ನರ್ ಇಟಲಿಯ ಸಹ ಆಟಗಾರ ಲೊರೆಂಜೊ ಸೊನೆಗೊ ವಿರುದ್ಧ ನೇರ ಸೆಟ್ಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ US ಓಪನ್ನಲ್ಲಿ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ. ಎರಡನೇ ಸುತ್ತಿನಲ್ಲಿ ಸಿನ್ನರ್ ಎದುರಾಳಿಯನ್ನು 6-4, 6-2, 6-4 ಸೆಟ್ಗಳಿಂದ ಸೋಲಿಸಿದ್ದಾರೆ. ಈ ಮೂಲಕ ಇಟಾಲಿಯನ್ ಎದುರಾಳಿಗಳ ವಿರುದ್ಧ 10ರಲ್ಲಿ 10 ಗೆಲುವಿನ ಸಾಧನೆ ಮಾಡಿದ್ದಾರೆ.
ಈ ಮಧ್ಯೆ ತಮ್ಮ ವೃತ್ತಿಜೀವನದ ಅಂತಿಮ ಗ್ರ್ಯಾಂಡ್ ಸ್ಲಾಮ್ ಆಡುತ್ತಿರುವ ಯುಎಸ್ಎಯ ಜಾನ್ ಇಸ್ನರ್ ಎದುರಾಳಿ ಮೈಕೆಲ್ ಮೋಹ್ ವಿರುದ್ಧ ಸೋಲು ಕಂಡಿದ್ದಾರೆ. ಮೋಹ್ ಇಸ್ನರ್ 3-6, 4-6, 7-6, 6-4, 7-6 ಸೆಟ್ಗಳಿಂದ ಜಾನ್ ಇಸ್ನರ್ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications