ಫೆಡರರ್ ವಿರುದ್ಧ ಸೆಟ್ ಜಯಿಸಿದ ಮೊದಲ ಭಾರತೀಯ ಸುಮಿತ್ ನಗಾಲ್!

ನ್ಯೂಯಾರ್ಕ್, ಆಗಸ್ಟ್ 26: ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಯೂಎಸ್ ಓಪನ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಟೆನಿಸ್ ದಿಗ್ಗಜ, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಮೊದಲ ಟೆಸ್ಟ್ ಜಯಿಸುವ ಮೂಲಕ ಭಾರತದ ಸುಮಿತ್ ನಗಾಲ್ ವಿಶ್ವದ ಗಮನ ಸೆಳೆದಿದ್ದಾರೆ.
ಮಂಗಳವಾರ (ಆಗಸ್ಟ್ 27) ನಡೆದ ಪುರುಷರ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಫೆಡರರ್, ಸುಮಿತ್ ವಿರುದ್ಧ 4-6, 6-1, 6-2, 6-4ರ ಗೆಲುವು ದಾಖಲಿಸಿ ದ್ವಿತೀಯ ಸೆಟ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಆರಂಭಿಕ ಸೆಟ್ಟನ್ನು 6-4ರಿಂದ ಗೆದ್ದುಕೊಂಡಿದ್ದ ಸುಮಿತ್ ಅವರತ್ತ ವಿಶ್ವವೇ ತಿರುಗಿ ನೋಡಿದೆ.
ಪ್ರತಿಷ್ಠಿತ ಟೆನಿಸ್ ಟೂರ್ನಿಯೊಂದರಲ್ಲಿ ರೋಜರ್ ಫೆಡರರ್ ವಿರುದ್ಧ ಸೆಟ್ ಗೆಲುವು ದಾಖಲಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೂ 22ರ ಹರೆಯದ ಸುಮಿತ್ ನಗಾಲ್ ಪಾತ್ರರಾಗಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ ಫೆಡರರ್ 3ನೇ ರ್ಯಾಂಕ್‌ನಲ್ಲಿದ್ದರೆ, ಸುಮಿತ್ 190ನೇ ಶ್ರೇಯಾಂಕಿತ.
ಪಂದ್ಯದ ಬಳಿಕ ಮಾತನಾಡಿದ ರೋಜರ್ ಫೆಡರರ್, 'ಸುಮಿತ್ ನಗಾಲ್‌ಗೆ ಅದ್ಭುತ ವೃತ್ತಿ ಬದುಕಿದೆ,' ಎಂದು ಶ್ಲಾಘಿಸಿದ್ದಾರೆ. ಯೂಎಸ್ ಓಪನ್‌ನಲ್ಲಿ ಒಟ್ಟು 5 ಸಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಫೆಡರರ್, ವೃತ್ತಿ ಜೀವನದಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications