For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್ 2023: ಮಾರ್ಕೆಟಾ ವೊಂಡ್ರೋಸೊವಾ ಮುಡಿಗೆ ವಿಂಬಲ್ಡನ್ ಮಹಿಳಾ ಕಿರೀಟ: ಓನ್ಸ್ ಜೇಬರ್ ರನ್ನರ್‌ಅಪ್

ಜೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೋಸೊವಾ ವಿಂಬಲ್ಡನ್ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಶ್ರೇಯಾಂಕರಹಿತ ಮಹಿಳೆ ಎಂಬ ಇತಿಹಾಸವನ್ನು ಬರೆದಿದ್ದಾರೆ ವೊಂಡ್ರೋಸೊವಾ. 24ರ ಹರೆಯದ ಜೆಕ್ ರಿಪಬ್ಲಿಕ್ ಆಟಗಾರ್ತಿ 6ನೇ ಶ್ರೇಯಾಂಕದ ಓನ್ಸ್ ಜಬೇರ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Wimbledon 2023: Marketa Vondrousova new womens wimbledon champion after outclassing Ons Jabeur in final

ಮಾರ್ಕೆಟಾ ವೊಂಡ್ರೊಸೊವಾ ಈ ಗೆಲುವು ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ನೂತನ ಚಾಂಪಿಯನ್ ಆಟಗಾರ್ತಿ ಆಯ್ಕೆಯಾಗುವ ಸಂಪ್ರದಾಯವನ್ನು ಮುಂದುವರಿಸಿದೆ. ಎಡಗೈ ಆಟಗಾರ್ತಿ ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು ಯಾವ ಹಂತದಲ್ಲಿಯೂ ಎದುರಾಲೀಗೆ ಅವಕಾಶವನ್ನು ನೀಡಲೇ ಇಲ್ಲ.

ಮಾರ್ಕೆಟಾ ವೊಂಡ್ರೊಸೊವಾ ಈ ಫೈನಲ್ ಸೆಣೆಸಾಟದಲ್ಲಿ ಓನ್ಸ್ ಜಬೇರ್ ವಿರುದ್ಧ ಗೆಲುವು ಸಾಧಿಸಲು ತೆಗೆದುಕೊಂಡಿದ್ದು ಕೇವಲ ಒಂದು ಗಂಟೆ 20 ನಿಮಿಷಗಳ ಮಾತ್ರ. 2019 ರಲ್ಲಿ ಮಾರ್ಕೆಟಾ ಫ್ರೆಂಚ್ ಓಪನ್‌ನ ಫೈನಲ್ ತಲುಪಿದರು ಆದರೆ ಮಾಜಿ ವಿಶ್ವ ನಂ. 1 ಆಶ್ ಬಾರ್ಟಿ ವಿರುದ್ಧ ಅಲ್ಲಿ ಅವರು ಸೋಲು ಅನುಭವಿಸಿದ್ದರು. ಆದರೆ ಲಂಡನ್‌ನಲ್ಲಿ ಶನಿವಾರ ಆ ಅವಕಾಶವನ್ನು ಎದುರಾಳಿಗೆ ನೀಡಲಿಲ್ಲ.

Story first published: Saturday, July 15, 2023, 23:26 [IST]
Other articles published on Jul 15, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+