Wimbledon 2023: ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ vs ಕಾರ್ಲೋಸ್ ಅಲ್ಕರೇಜ್ ಸೆಣೆಸಾಟ ಫಿಕ್ಸ್
ವಿಂಬಲ್ಡನ್ 2023ರ ಆವೃತ್ತಿ ಅಂತಿಮ ಘಟ್ಟವನ್ನು ತಲುಪಿದೆ. ಪುರುಷರ ಸೆಮಿಫೈನಲ್ ಪಂದ್ಯಗಳು ಮುಕ್ತಾಯವಾಗಿದ್ದು ಫೈನಲ್ ಪಂದ್ಯ ಮಾತ್ರವೇ ಬಾಕಿಯಿದೆ. ಶುಕ್ರವಾರ ಎರಡು ಸೆಮಿಫೈನಲ್ ಪಂದ್ಯಗಳು ಕೂಡ ಅಂತ್ಯವಾಗಿದ್ದು ಮೊದಲ ಸೆಮಿಫೈನಲ್‌ನಲ್ಲಿ ಜೊಕೊವಿಕ್ ಗೆಲುವು ಸಾಧಿಸಿ 9ನೇ ಬಾರಿಗೆ ವಿಂಬಲ್ಡನ್ ಫೈನಲ್‌ಗೆ ಪ್ರವೇಶ ಪಡೆದರೆ ಮತ್ತೊಂದು ಪಂದ್ಯದಲ್ಲಿ ಕಾರ್ಲೋಸ್ ಅಲ್ಕರೇಜ್ ಗೆದ್ದಿದ್ದು ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಸ್ಪೈನ್‌ನ ಕಾರ್ಲೋಸ್ ಅಲ್ಕರೇಜ್‌ಗೆ ಸೆಮಿಫೈನಲ್‌ನಲ್ಲಿ ಎದುರಾಗಿದ್ದು ರಷ್ಯಾದ ಡೇನಿಲ್ ಮಡ್ವೇಡೇವ್ ಸವಾಲು. ಈ ಪಂದ್ಯದಲ್ಲಿ 20ರ ಹರೆಯದ ಅಲ್ಕರೇಜ್ ರಷ್ಯಾ ಆಟಗಾರನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದು ಏಕಪಕ್ಷೀಯವಾಗಿ ಈ ಪಂದ್ಯವನ್ನು ಗೆದ್ದಿಕೊಂಡಿದ್ದಾರೆ. 6-3, 6-3, 6-3 ಅಂತರದಿಂದ ಅಲ್ಕರೇಜ್ ಗೆಲುವು ಸಾಧಿಸಿ ಬೀಗಿದ್ದಾರೆ.

ಮ್ಯಾನುಯೆಲ್ ಸ್ಯಾಂಟನಾ ಮತ್ತು ರಾಫೆಲ್ ನಡಾಲ್ ನಂತರ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ ಮೂರನೇ ಸ್ಪೇನ್ ಆಟಗಾರ ಎನಿಸಿಕೊಂಡಿದ್ದಾರೆ ಅಲ್ಕಾರೇಜ್. ಅಲ್ಲದೆ ವೃತ್ತಿಪರ ಎರಾದಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಜುಲೈ 14ಶುಕ್ರವಾರ ಲಂಡನ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿ-ಫೈನಲ್‌ನಲ್ಲಿ ಕದನದಲ್ಲಿ ಜೊಕೊವಿಕ್ ಹಾಗೂ 21 ವರ್ಷದ ಜಾನಿಕ್ ಸಿನ್ನರ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಸಿನ್ನರ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ಸರ್ಬಿಯಾದ ದಿಗ್ಗಜ ತನ್ನ 9ನೇ ವಿಂಬಲ್ಡನ್ ಫೈನಲ್‌ಗೆ ಹೆಜ್ಜೆ ಹಾಕಿದರು. 2 ಗಂಟೆ 47 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ ಸಿನ್ನರ್ ಅವರನ್ನು ಜೊಕೊವಿಕ್ 6-3, 6-4, 7-6 (4) ಸಿನ್ನರ್ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
2013ರಲ್ಲಿ ಫೈನಲ್‌ನಲ್ಲಿ ಸೋಲು ಕಂಡ ಬಳಿಕ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಜೊಕೊವಿಕ್ ಸೋಲೇ ಕಂಡಿಲ್ಲ. ಈ ಪಂದ್ಯದ ಮೂರು ಸೆಟ್‌ಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಜೊಕೊವಿಕ್ ಭರ್ಜರಿಯಾಗಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ವಿಂಬಲ್ಡನ್‌ನಲ್ಲಿ ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಪೀಟ್ ಸಾಂಪ್ರಾಸ್ ಮತ್ತು ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಅವಕಾಶ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications