Wimbledon 2023: ಹಾಲಿ ಚಾಂಪಿಯನ್ ರೆಬಕಿನಾ ಔಟ್: ಸೆಮಿಫೈನಲ್‌ಗೇರಿದ ಜಬೇರ್, ಸಬಲೆಂಕಾ
ಹಾಲಿ ಚಾಂಪಿಯನ್ ಎಲೆನಾ ರೆಬಕಿನಾಗೆ ಕ್ವಾರ್ಟರ್ಫೈನಲ್‌ನಲ್ಲಿಯೇ ಆಘಾತವುಂಟಾಗಿದೆ. ಜುಲೈ 12 ಬುಧವಾರ ನಡೆದ ವಿಂಬಲ್ಡನ್ 2023 ರ ಮಹಿಳಾ ಸಿಂಗಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ವಿಶ್ವದ 6ನೇ ಶ್ರೇಯಾಂಕದ ಆಟಗಾರ್ತಿ ಓನ್ಸ್ ಜಬೇರ್ ಎಲೆನಾ ರೈಬಾಕಿನಾ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಿ ಚಾಂಪಿಯನ್ ರೆಬಾಕಿನಾ ಅವರನ್ನು ಜಬೇರ್ 6-7 (5-7), 6- 4, 6-4 ಅಂತರದಿಂದ ಮಣಿಸಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಒಂದು ಗಂಟೆ 53 ನಿಮಿಷಗಳಲ್ಲಿ ಕಾಲ ನಡೆದ ಈ ಸೆಣೆಸಾಟದಲ್ಲಿ ಜಬೇರ್ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಈ ಮೂಲಕ ಕಳೆದ ವರ್ಷದ ಫೈನಲ್ ಸೋಲಿಗೆ ಜಬೇರ್ ಸೇಡು ತೀರಿಸಿಕೊಂಡಿದ್ದಾರೆ. ಕಳೆದ ವರ್ಷದ ವಿಂಬಲ್ಡನ್‌ನ ಫೈನಲ್‌ನಲ್ಲಿ ಮೊದಲ ಸೆಟ್ಟನ್ನು ಜಬೇರ್ ಗೆದ್ದುಕೊಂಡಿದ್ದರೂ ಅದಾದ ಬಳಿಕದ ಎರಡು ಸೆಟ್‌ನಲ್ಲಿಯೂ ರೆಬಕಿನಾ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದರು. ಇದೀಗ ಈ ಬಾರಿಯ ಕ್ವಾರ್ಟರ್‌ಫೈನಲ್‌ನಲ್ಲಿ ಈ ಇಬ್ಬರು ಮುಖಾಮುಖಿಯಾಗಿದ್ದಾಗ ಅದೇ ಮಾದರಿಯಲ್ಲಿ ರೆಬಕಿನಾಗೆ ಸೋಲುಣಿಸಿದ್ದಾರೆ ಜಬೇರ್.
ಜಬೇರ್‌ಗೆ ಮುಂದಿನ ಸವಾಲು ಬೆಲಾರಸ್‌ನ ಅರೀನಾ ಸಬಲೆಂಕಾ ಅವರಿಂದ ಎದುರಾಗಲಿದೆ. ಸಬಲೆಂಕಾ ಯುಎಸ್‌ಎಯ ಮ್ಯಾಡಿಸನ್ ಕೀಸ್‌ರನ್ನು ಸೋಲಿಸಿ ತನ್ನ ಎರಡನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸಬಲೆಂಕಾ ಕ್ವಾರ್ಟರ್‌ಫೈನಲ್‌ನಲ್ಲಿ ಕೀಸ್ ಅವರಿಂದ ಹೆಚ್ಚಿನ ಪ್ರತಿರೋಧ ಎದುರಿಸಲಿಲ್ಲ. ಒಂದು ಗಂಟೆ 27 ನಿಮಿಷಗಳ ಕಾಲ ನಡೆದ ಪಂದ್ಯವನ್ನು 6-2, 6-4 ಅಂತರದಿಂದ ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications