Wimbledon 2023: ಸತತ 2ನೇ ಬಾರಿ ಫೈನಲ್‌ಗೆ ಪ್ರವೇಶಿಸಿದ ಓನ್ಸ್ ಜೇಬರ್, ಬೋಪಣ್ಣ-ಎಬ್ಡೆನ್ ಸವಾಲು ಅಂತ್ಯ
ಟ್ಯುನೀಶಿಯಾ ಆಟಗಾರ್ತಿ ಓನ್ಸ್ ಜಬೇರ್ ಸೆಮಿಫೈನಲ್‌ನಲ್ಲಿ ಅರೀನಾ ಸಬಲೆಂಕಾ ಅವರನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಮೂರು ಸೆಟ್‌ಗಳ ಸೆಣೆಸಾಟದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಗೆಲುವು ಸಾಧಿಸಿ ಗಮನಸೆಳೆದರು.
ಸಬಲೆಂಕಾ ವಿರುದ್ಧ ನಡೆದ ಈ ರೋಚಕ ಸೆಮಿಫೈನಲ್ ಕಾದಾಟದಲ್ಲಿ 6-7(5), 6-4, 6-3 ಅಂಕಗಳಿಂದ ಜೇಬರ್ ಗೆಲುವು ಸಾಧಿಸಿದ್ದು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದರು. ಈ ಪೈಪೋಟಿ ಎರಡು ಗಂಟೆ 19 ನಿಮಿಷಗಳ ಕಾಲ ನಡೆಯಿತು. ಫೈನಲ್‌ನಲ್ಲಿ ಜೇಬರ್ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

ಇನ್ನು ಮತ್ತೊಂದೆಡೆ 24 ರ ಹರೆಯದ ಜೆಕ್ ಟೆನಿಸ್ ಸೆನ್ಸೇಶನ್ ಮಾರ್ಕೆಟಾ ವೊಂಡ್ರೊಸೊವಾ ಹೊಸ ಇತಿಹಾಸ ಬರೆದಿದ್ದಾರೆ. ಅವರು ವಿಂಬಲ್ಡನ್ 2023 ರಲ್ಲಿ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದು ಓಪನ್ ಎರಾದಲ್ಲಿ ಗ್ರಾಸ್-ಕೋರ್ಟ್ ಗ್ರ್ಯಾಂಡ್ ಸ್ಲಾಮ್‌ನ ಫೈನಲ್‌ಗೆ ಪ್ರವೇಶಿಸಿದ ಶ್ರೇಯಾಂಕ ರಹಿತ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಉಕ್ರೇನಿಯನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಅವರು ಈ ಸಾಧನೆ ಮಾಡಿದರು.
ಇದೀಗ ಓನ್ಸ್ ಜೇಬರ್ ಹಾಗೂ ಮಾರ್ಕೆಟಾ ವೊಂಡ್ರೊಸೊವಾ ಫೈನಲ್‌ಗೆ ಪ್ರವೇಶಿಸುವ ಮೂಲಕ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮತ್ತೊಂದು ಹೊಸ ಚಾಂಪಿಯನ್ ಹೊರಹೊಮ್ಮುವುದು ಖಚಿತವಾಗಿದೆ. ಈ ಇಬ್ಬರು ಕೂಡ ಮೊದಲ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಕಣ್ಣಿಟ್ಟಿದ್ದಾರೆ.
ಇನ್ನು ವಿಂಬಲ್ಡನ್ 2023ರ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ನಿರಾಸೆ ಅನುಭವಿಸಿದ್ದಾರೆ. ಆರನೇ ಶ್ರೇಯಾಂಕದ ಜೋಡಿಯು ಅಗ್ರ ಶ್ರೇಯಾಂಕದ ವೆಸ್ಲಿ ಕೂಲ್‌ಹಾಫ್ ಮತ್ತು ನೀಲ್ ಸ್ಕುಪ್ಸ್ಕಿ ಜೋಡಿಯ ವಿರುದ್ಧ ನೇರ ಸೆಟ್‌ಗಳ (5-7, 4-6) ಸೋಲನ್ನು ಅನುಭವಿಸಿ ಫೈನಲ್ ಕನಸು ಭಗ್ನಗೋಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications