Wimbledon: 10ನೇ ದಿನ ಗೆದ್ದವರು ಸೋತವರು ಯಾರು?: ಅಲ್ಕರೇಜ್, ಜಬೇರ್, ಸಮಲೆಂಕಾ ಸೆಮಿಫೈನಲ್‌ಗೆ ಲಗ್ಗೆ
ವಿಂಬಲ್ಡನ್ 2023ರ 10ನೇ ದಿನ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಸೆಂಟರ್ ಕೋರ್ಟ್ ಮತ್ತು ಕೋರ್ಟ್ 1ರಲ್ಲಿ ನಾಲ್ಕು ಕ್ವಾರ್ಟರ್-ಫೈನಲ್ ಪಂದ್ಯಗಳಿಗೆ ಈ ಬುಧವಾರ ಸಾಕ್ಷಿಯಾಯಿತು. ಮೊದಲಿಗೆ ಮಹಿಳೆಯರ ಸಿಂಗಲ್ಸ್ ಪಂದ್ಯಗಳು ನಡೆದಿದ್ದು ಬಳಿಕ ನಂತರ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದಿದೆ.
ಅರೀನಾ ಸಬಲೆಂಕಾ ಮ್ಯಾಡಿಸನ್ ಕೀಸ್ ವಿರುದ್ಧ ಸೆಣೆಸಾಡಿದ್ದು ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಒಂದು ಗಂಟೆ 27 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮ್ಯಾಡಿಸನ್ ಕೀಸ್ ಅವರನ್ನು 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. 2021ರ ಬಳಿಕ ಮತ್ತೊಮ್ಮೆ ಸೆಮಿಫೈನಲ್‌ಗೆ ಪ್ರವೇಶ ಪಡೆದಕೊಂಡಿದ್ದಾರೆ.

ಇನ್ನು ಮತ್ತೊಂದೆಡೆ ಹಾಲಿ ಚಾಂಪಿಯನ್ ಎಲೆನಾ ರೆಬಕಿನಾಗೆ ಕ್ವಾರ್ಟರ್ಫೈನಲ್‌ನಲ್ಲಿ ಆಘಾತ ಎದುರಾಗಿದೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ವಿಶ್ವದ 6ನೇ ಶ್ರೇಯಾಂಕದ ಆಟಗಾರ್ತಿ ಓನ್ಸ್ ಜಬೇರ್ ಎಲೆನಾ ರೈಬಾಕಿನಾ ವಿರುದ್ಧ ಕಳೆದ ವರ್ಷದ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಚಾಂಪಿಯನ್ ರೆಬಾಕಿನಾ ಅವರನ್ನು ಜಬೇರ್ 6-7 (5-7), 6- 4, 6-4 ಅಂತರದಿಂದ ಮಣಿಸಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಕದನ ಒಂದು ಗಂಟೆ 53 ನಿಮಿಷಗಳಲ್ಲಿ ಕಾಲ ನಡೆಯಿತು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.3 ಡೇನಿಯಲ್ ಮೆಡ್ವೆಡೆವ್ ಎದುರಾಳಿ ಕ್ರಿಸ್ಟೋಫರ್ ಯುಬ್ಯಾಂಕ್ಸ್ ಅವರನ್ನು ಮಣಿಸಿದ್ದಾರೆ. ಎರಡು ಗಂಟೆ 58 ನಿಮಿಷಗಳಲ್ಲಿ ನಡೆದ ಈ ಪಂದ್ಯದಲ್ಲಿ ಮೆಡ್ವೆಡೆವ್ 6-4, 1-6, 4-6, 7-6 (7-4), 6-1 ಸೆಟ್‌ಗಳ ಅಂತದಿಂದ ಗೆಲುವು ಸಾಧಿಸಿ ಮುನ್ನುಗ್ಗಿದ್ದಾರೆ.
ಮೆಡ್ವೆಡೆವ್‌ಗೆ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ಇತ್ತ ಅಲ್ಕರಾಜ್‌ಗೆ ಯುವ ಸೆನ್ಸೇಶನ್ ಹೋಲ್ಗರ್ ರೂಟ್ ಅವರಿಂದ ಕಠಿಣ ಪೈಪೋಟಿ ಎದುರಾಗಿದ್ದು ಎರಡು ಗಂಟೆ 21 ನಿಮಿಷಗಳ ಕಾದಾಟದಲ್ಲಿ ಅಲ್ಕರೇಜ್ 7-6 (7-3), 6-4, 6-4 ಅಂತರದಿಂದ ಗೆಲುವು ಸಾಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications