Wimbledon 2023: 2ನೇ ಸುತ್ತಿನಲ್ಲಿ ಪ್ರಾಬಲ್ಯಕ್ಕೆ ಜೊಕೊವಿಕ್, ಸ್ವೆಟೆಕ್ ಸಿದ್ಧ: 3ನೇ ದಿನದ ವೇಳಾಪಟ್ಟಿ
ವಿಂಬಲ್ಡನ್ ಅಂಗಳದಲ್ಲಿ ಮೂರನೇ ದಿನವೂ ಸಾಕಷ್ಟು ರೋಮಾಂಚಕ ಸೆಣೆಸಾಟಗಳಿಗೆ ವೇದಿಕೆ ಸಜ್ಜಾಗಿದೆ. ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯಗಳು ಇಂದು ನಡೆಯಲಿದ್ದು ಹಲವು ಸ್ಟಾರ್ ಆಟಗಾರರು ಇಂದು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪುರುಷರ ವಿಭಾಗದಲ್ಲಿ ನೊವಾಕ್ ಜೊಕೊವಿಕ್ ಇಂದು ಎರಡನೇ ಸುತ್ತಿನ ಸೆಣೆಸಾಟವನ್ನು ನಡೆಸಲಿದ್ದರೆ ಮಹಿಳಾ ವಿಭಾಗದಲ್ಲಿ ಈಗಾಗ ಸ್ವೆಟೆಕ್ ಇಂದು ಕಣಕ್ಕಿಳಿಯಲಿದ್ದಾರೆ.
ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಇಂದು ಆಸ್ಟ್ರೇಲಿಯಾದ ಜೋರ್ಡಾನ್ ಥಾಂಪ್ಸನ್ ಅವರನ್ನು ಎರಡನೇ ಸುತ್ತಿನಲ್ಲಿ ಎದುರಿಸಲಿದ್ದಾರೆ. ಈ ಮಧ್ಯೆ ಮಹಿಳಾ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ಸ್ಪೇನ್‌ನ ಸಾರಾ ಸೊರಿಬ್ಸ್ ಟೊರ್ಮೊ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮತ್ತೊಂದು ಗಮನಸಿಬೇಕಾದರೆ ಮುಖಾಮುಖಿಯೆಂದರೆ ಆರ್ಥರ್ ಫೆರಿ ವಿರುದ್ಧ ಡೇನಿಯಲ್ ಮೆಡ್ವೆಡೆವ್ ಕಣಕ್ಕಿಳಿಯಲಿದ್ದು ಈ ಮೂಲಕ ತಮ್ಮ ವಿಂಬಲ್ಡನ್ 2023ರ ಅಭಿಯಾನ ಆರಂಭಿಸಲಿದ್ದಾರೆ.

22 ವರ್ಷದ ಪೋಲಿಷ್ ಆಟಗಾರ್ತಿ ಈಗಾ ಸ್ವೆಟೆಕ್ ಇತ್ತೀಚೆಗೆ ತನ್ನ ಮೂರನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ಈಗ ಹುಲ್ಲಿನ ಅಂಗಳದಲ್ಲಿ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅದ್ಭಿತ ಪ್ರದರ್ಶನದ ಹೊರತಾಗಿಯೂ ಸ್ವಿಟೆಕ್ ಹಿಂದಿನ ವರ್ಷಗಳಲ್ಲಿ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿಲ್ಲ.
ಇನ್ನು ಮಳೆಯಿಂದಾಗಿ ಡೊಮಿನಿಕ್ ಥೀಮ್ ಮತ್ತು ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧದ ಪಂದ್ಯ ಅಪೂರ್ಣವಾಗಿದ್ದ ಕಾರಣ ಇಂದು ಈ ಮೊದಲ ಸುತ್ತಿನ ಪಂದ್ಯ ಮುಂದಿವರಿಯಲಿದೆ. ಥಿಯೆಮ್ ಆರಂಭಿಕ ಸೆಟ್ ಅನ್ನು 6-3 ರಿಂದ ಗೆದ್ದರೆ, ಸಿಟ್ಸಿಪಾಸ್ ಎರಡನೇ ಸೆಟ್ನಲ್ಲಿ 4-3 ಮುನ್ನಡೆ ಸಾಧಿಸಿದ್ದರು. ಇನ್ನುಳಿದಂತೆ ಅಭಿಮಾನಿಗಳು ಜಾನಿಕ್ ಸಿನ್ನರ್, ಬಾರ್ಬೊರಾ ಕ್ರೆಜ್ಸಿಕೋವಾ, ಟೇಲರ್ ಫ್ರಿಟ್ಜ್, ಫ್ರಾನ್ಸಿಸ್ ಟಿಯಾಫೊ ಮತ್ತು ಮಾರಿಯಾ ಸಕರಿ ಅವರ ಪಂದ್ಯಗಳನ್ನು ಇಂದು ವೀಕ್ಷಿಸಬಹುದು.
ಮೂರನೇ ದಿನದಾಟದ ವೇಳಾಪಟ್ಟಿ ಹೀಗಿದೆ.
ಸೆಂಟರ್ ಕೋರ್ಟ್
ಮೊದಲ ಮುಖಾಮುಖಿ: ಡೇರಿಯಾ ಕಸಟ್ಕಿನಾ vs ಜಾಡಿ ಬರೇಜ್(ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭ)
ಎರಡನೇ ಮುಖಾಮುಖಿ: ಈಗಾ ಸ್ವೆಟೆಕ್ vs ಸಾರಾ ಸೊರಿಬ್ಸ್ ಟಾರ್ಮೊ
ಮೂರನೇ ಮುಖಾಮುಖಿ: ನೊವಾಕ್ ಜೊಕೊವಿಕ್ ವಿರುದ್ಧ ಜೋರ್ಡಾನ್ ಥಾಂಪ್ಸನ್
ಕೋರ್ಟ್ 1
ಮೊದಲ ಮುಖಾಮುಖಿ: ಡೇನಿಯಲ್ ಮೆಡ್ವೆಡೆವ್ vs ಆರ್ಥರ್ ಫೆರಿ(ಭಾರತೀಯ ಕಾಲಮಾನ ಸಂಜೆ 5:230ಕ್ಕೆ ಆರಂಭ)
ಎರಡನೇ ಮುಖಾಮುಖಿ: ಬಾರ್ಬೊರಾ ಕ್ರೆಜ್ಸಿಕೋವಾ vs ಹೀದರ್ ವ್ಯಾಟ್ಸನ್
ಮೂರನೇ ಮುಖಾಮುಖಿ: ಜಾನಿಕ್ ಸಿನ್ನರ್ vs ಡಿಯಾಗೋ ಶ್ವಾರ್ಟ್ಜ್‌ಮನ್
ಕೋರ್ಟ್ 2
ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭ
ಮಾರಿಯಾ ಸಕರಿ vs ಮಾರ್ಟಾ ಕೋಸ್ಟ್ಯುಕ್
ಟೇಲರ್ ಫ್ರಿಟ್ಜ್ vs ಯಾನಿಕ್ ಹ್ಯಾನ್ಫ್ಮನ್
ಡೊಮಿನಿಕ್ ಥೀಮ್ vs ಸ್ಟೆಫಾನೋಸ್ ಸಿಟ್ಸಿಪಾಸ್
ಅಲೆಕ್ಸಾಂಡರ್ ಜ್ವೆರೆವ್ vs ಗಿಜ್ಸ್ ಬ್ರೌವರ್
ಸ್ಥಳೀಯ ಸಮಯ 4:30 ಕ್ಕೆ ಮೊದಲು ಅಲ್ಲ: (19) ವಿಕ್ಟೋರಿಯಾ ಅಜರೆಂಕಾ ವಿರುದ್ಧ ನಾಡಿಯಾ ಪೊಡೊರೊಸ್ಕಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications