ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಫೈನಲ್‌ಗೇರಿದ ಮೊದಲ ಇಟಲಿಯನ್ ಮ್ಯಾಟಿಯೊ ಬೆರೆಟ್ಟಿನಿ

ಲಂಡನ್: ಇಟಲಿಯ ಟೆನಿಸ್ ಆಟಗಾರ ಮ್ಯಾಟಿಯೊ ಬೆರೆಟ್ಟಿನಿ ವಿಂಬಲ್ಡನ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಫೈನಲ್‌ಗೇರಿದ ಮೊದಲ ಇಟಲಿಯನ್ ಆಟಗಾರನಾಗಿ ಬೆರೆಟ್ಟಿನಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ (ಜುಲೈ 9) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಬರ್ಟ್ ಹರ್ಕಾಕ್ಜ್ ಸೋಲಿಸಿರುವ ಬೆರೆಟ್ಟಿನಿ ಈ ವಿಶೇಷ ಸಾಧನೆ ತೋರಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಪೋಲ್ಯಾಂಡ್ ಆಟಗಾರ ಹಬರ್ಟ್ ಹರ್ಕಾಕ್ಜ್ ವಿರುದ್ಧ ಮ್ಯಾಟಿಯೊ ಬೆರೆಟ್ಟಿನಿ 6-3, 6-0, 6-7 (3/7), 6-4ರ ಅಂತರದಿಂದ ಗೆಲುವು ಸಾಧಿಸಿದರು. ಹರ್ಕಾಕ್ಜ್ ಅವರು ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದರು.
ಫೈನಲ್ ಪಂದ್ಯದಲ್ಲಿ ಬೆರೆಟ್ಟಿನಿ ಒಂದೋ ಸರ್ಬಿಯಾ ಸ್ಟಾರ್ ನೊವಾಕ್ ಜೊಕೋವಿಕ್ ಅಥವಾ ಕೆನಡಾದ ಡೆನಿಸ್ ಶಪೋವೊಲೊವ್ ಅವರ ಸವಾಲು ಸ್ವೀಕರಿಸಲಿದ್ದಾರೆ. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಫೈನಲ್‌ನಲ್ಲಿ ಬೆರೆಟ್ಟಿನಿ ಗೆದ್ದರೆ ಇಟಲಿಯಿಂದ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಅಪರೂಪದ ದಾಖಲೆಗೆ ಕಾರಣರಾಗಲಿದ್ದಾರೆ.
1976ರ ಫ್ರೆಂಚ್ ಓಪನ್‌ನಲ್ಲಿ ಇಟಲಿಯ ಆಡ್ರಿನೊ ಪನಾಟ್ಟಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅದಾಗಿ ಇಟಲಿಯಿಂದ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಮೊದಲಿಗನೆನಿಸಲು ಬೆರೆಟ್ಟಿನಿಗೆ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications