Wimbledon: ಸೂಟ್, ಬೂಟ್‌ನಲ್ಲಿ ಕಾಣಿಸಿಕೊಂಡ 15 ವರ್ಷದ ವೈಭವ್; ಯಾವ ಹೀರೋಗೂ ಕಮ್ಮಿ ಇಲ್ಲ ಲುಕ್..
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಟಿ20 ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದ ಪೋರ 15 ವರ್ಷದ ವೈಭವ್ ಸೂರ್ಯವಂಶಿ. ಐಪಿಎಲ್‌ನಲ್ಲಿ ಆಡಿದ ಧಾಟಿಯನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. 15 ವರ್ಷದ ವೈಭವ್ ಆಟವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಇವರು ಸಿಕ್ಕ ಅವಕಾಶದಲ್ಲಿ ಅಬ್ಬರದ ಆಟವನ್ನು ಆಡುವಲ್ಲಿ ವಿಫಲರಾದರೂ ಸಹ ಅಭಿಮಾನಿಗಳ ಅಪಾರ ಪ್ರೀತಿಯನ್ನು ಗಳಿಸುವಲ್ಲಿ ಸಫಲರಾದರು. ಸದ್ಯ ಇಂಗ್ಲೆಂಡ್‌ನಲ್ಲಿರುವ ವೈಭವ್ ಸೂರ್ಯವಂಶಿ ವಿಂಬಲ್ಡನ್ ಫೈನಲ್ ಪಂದ್ಯವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ.
ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವನ್ನು ಆಡಲಾಯಿತು. ಈ ಪಂದ್ಯವನ್ನು ನೋಡಲು ವೈಭವ್ ಸೂರ್ಯವಂಶಿ ಸಹ ಹಾಜರಿದ್ದರು. ಇದೇ ವೇಳೆ ಇವರೊಂದಿಗೆ ಅಭಿಷೇಕ್ ಶರ್ಮಾ, ದಿಗ್ಗಜ ಆಲ್‌ರೌಂಡರ್ ಯುವರಾಜ್ ಸಿಂಗ್ ಸಹ ಕಾಣಿಸಿಕೊಂಡರು.

ಸ್ಟೈಲಿಷ್ ಲುಕ್
ವೈಭವ್ ಸೂರ್ಯವಂಶಿ ವಿಂಬಲ್ಡನ್ ಫೈನಲ್ ನೋಡಲು ಸ್ಟೈಲಿಷ್ ಆಗಿ ಬಂದಿದ್ದರು. ಬ್ಲ್ಯೂ ಸೂಟ್, ವೈಟ್ ಶರ್ಟ್, ಟೈ, ಕನ್ನಡಕ ಹಾಕಿಕೊಂಡು ಎಲ್ಲರ ಗಮನ ಸೆಳೆದರು. ಇವರು ಯುವರಾಜ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು.
ಫೈನಲ್ ಪಂದ್ಯವನ್ನು ವೀಕ್ಷಿಸಿದ ಬಳಿಕ ಜಿಯೋ ಹಾಟ್ ಸ್ಟಾರ್ ಜೊತೆಗೆ ಮಾತನಾಡಿದ ವೈಭವ್ ಸೂರ್ಯವಂಶಿ, ನಾನು ಕಳೆದ 4 ರಿಂದ 5 ವರ್ಷಗಳಿಂದ ಟೆನಿಸ್ ಆಟವನ್ನು ನೋಡುತ್ತಿದ್ದೇನೆ. ನಾನು ನಡಾಲ್ ಹಾಗೂ ಜೋಕೊವಿಚ್ ಅವರ ದೊಡ್ಡ ಅಭಿಮಾನಿ. ಇವರಿಬ್ಬರನ್ನೂ ನಾನು ಹೆಚ್ಚಾಗಿ ಫಾಲೋ ಮಾಡಿದ್ದೇನೆ. ಇತ್ತೀಚಿನ ಪೀಳಿಗೆಯ ಆಟಗಾರರಲ್ಲಿ ಕಾರ್ಲಸ್ ಅಲ್ಕರಾಜ್ ಆಟ ನನಗೆ ಇಷ್ಟ ಎಂದು ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಅಭಿಷೇಕ್ ಶರ್ಮಾ ಅವರ ಬಗ್ಗೆಯೂ ಅಭಿಷೇಕ್ ಶರ್ಮಾ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ನನ್ನ ಜೊತೆಗಾರ. ಅವರೊಂದಿಗೆ ಬ್ಯಾಟಿಂಗ್ ಮಾಡಲು ನನಗೆ ತುಂಬ ಇಷ್ಟ. ಇವರೇ ನನ್ನ ಟೆನಿಸ್‌ನಲ್ಲಿ ಡಬಲ್ಸ್ ಜೊತೆಗಾರ ಎಂದಿದ್ದಾರೆ.
ವಿಂಬಲ್ಡನ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಸಹ ಹಾಜರಿದ್ದರು. ಇನ್ನು ಇದೇ ಮೊದಲ ಬಾರಿಗೆ ವೈಭವ್ ಸೂರ್ಯವಂಶಿ ವಿಂಬಲ್ಡನ್ ನೋಡಲು ಬಂದಿದ್ದರಿಂದ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು.
ಸಿನ್ನರ್ ಚಾಂಪಿಯನ್
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಆಟಗಾರ ಯಾನಿಕ್ ಸಿನ್ನರ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪ್ರಶಸ್ತಿಗಾಗಿ ಕಾದಾಟ ನಡೆಸಿದರು. 3 ಗಂಟೆ 46 ನಿಮಿಷ ನಡೆದ ಕಾದಾಟದಲ್ಲಿ ಸಿನ್ನರ್ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿದರು. ಇವರು 6-7, 7-6, 6-3, 6-4 ರಿಂದ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿದರು. ಅಲ್ಲದೆ ತಮ್ಮ ವೃತ್ತಿ ಜೀವನದ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ಬೀಗಿದರು. ಟೆನಿಸ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ 10ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಸಿನ್ನರ್ ತಮ್ಮದಾಗಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications