For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನೊವಾಕ್ ಜೊಕೋವಿಕ್ ನಿರ್ಧಾರ

World No. 1 Novak Djokovic decides to compete at the Tokyo Olympics

ಬೆಲ್ಗ್ರೇಡ್: ವಿಶ್ವ ನಂ.1 ಟೆನಿಸ್ ಆಟಗಾರ, ಸರ್ಬಿಯನ್ ಬಲಿಷ್ಠ ನೊವಾಕ್ ಜೊಕೋವಿಕ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಬೇಕೋ ಬೇಡವೋ ಅನ್ನೋದನ್ನು ನಾನಿನ್ನೂ ನಿರ್ಧರಿಸಿಲ್ಲ ಎಂದು ಈ ಮೊದಲು ಹೇಳಿದ್ದ ಜೊಕೋವಿಕ್ ಈಗ ಆಡುವುದಾಗಿ ಹೇಳಿದ್ದಾರೆ.

ಕೋವಿಡ್ 19 ಭೀತಿಯ ಕಾರಣ ಟೋಕಿಯೋ ಒಲಿಂಪಿಕ್ಸ್ ಆಯೋಜನೆಯೇ ಪ್ರಶ್ನೆಯಾಗಿ ಉಳಿದಿದ್ದಾಗ ತಾನು ಒಲಿಂಪಿಕ್ಸ್‌ನಲ್ಲಿ ಆಡುತ್ತೇನೋ ಇಲ್ಲವೋ ಗೊತ್ತಿಲ್ಲ, ಆಡಬೇಕು ಅನ್ನಿಸಿದರೆ ಮಾತ್ರ ಆಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ನಾನು ಟೋಕಿಯೋಗೆ ವಿಮಾನ ಹತ್ತಲು ನಿರ್ಧರಿಸಿದ್ದೇನೆ ಎಂದು ಜೊಕೋವಿಕ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಜೊಕೋವಿಕ್, "ನನ್ನ ಪುಟಾಣಿ ಗೆಳೆಯ ಕೌಜಿರೌನನ್ನು ನಿರಾಶೆ ಮಾಡಲಾರೆ. ನಾನು ಟೋಕಿಯೋಗೆ ವಿಮಾನ ಬುಕ್ ಮಾಡಿದ್ದೇನೆ. ಹೆಮ್ಮೆಯಿಂದ ನನ್ನ ಸರ್ಬಿಯಾ ಒಲಿಂಪಿಕ್ಸ್ ತಂಡ ಸೇರಿಕೊಳ್ಳಲಿದ್ದೇನೆ," ಎಂದು ಬರೆದುಕೊಂಡಿದ್ದಾರೆ.

ಈ ವರ್ಷ ನೊವಾಕ್ ಜೊಕೋವಿಕ್ ಅವರು ವಿಂಬಲ್ಡನ್, ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓವನ್‌ನಲ್ಲಿ ಈಗಾಗಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಒಲಿಂಪಿಕ್ಸ್‌ನಲ್ಲೂ ಜೊಕೋವಿಕ್ ಚಿನ್ನದ ಪದಕದ ಗುರಿ ಇಟ್ಟುಕೊಂಡಿದ್ದಾರೆ.

Story first published: Saturday, July 17, 2021, 7:58 [IST]
Other articles published on Jul 17, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+