Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಓಪನ್: ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ಪಿವಿ ಸಿಂಧು, ಶ್ರೀಕಾಂತ್, ಪ್ರಿಯಾನ್ಶು

ಆಸ್ಟ್ರೇಲಿಯ ಓಪನ್ 2023ರಲ್ಲಿ ಎರಡನೇ ಸುತ್ತಿನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ರಾಜಾವತ್ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಮತ್ತೊಂದೆಡೆ ಯುವ ಶಟ್ಲರ್ ಮಿಥುನ್ ಮಂಜುನಾಥ್ ಟೂರ್ನಿಯಿಂದ ಹೊರಬಿದ್ದರಾದರೂ ಅದಕ್ಕೂ ಮುನ್ನ ವೀರಾವೇಶದ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.

ಮೊದಲ ಸುತ್ತಿನಲ್ಲಿ 47ನೇ ಶ್ರೇಯಾಂಕಿತೆ ಅಶ್ಮಿತಾ ಚಲಿನಾ ಅವರನ್ನು ಎದುರಿಸಿದ್ದು ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಮತ್ತೋರ್ವ ಭಾರತೀಯ ಆಟಗಾರ್ತಿ ಆಕರ್ಶಿ ಕಶ್ಯಪ್ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. 21-14, 21-10 ಅಂತರದಿಂದ ಎರಡನೇ ಸುತ್ತಿನಲ್ಲಿ ಸಿಂಧು ಗೆಲುವು ಸಾಧಿಸಿದ್ದು ಇದಕ್ಕಾಗಿ ಅವರು ಕೇವಲ 38 ನಿಮಿಷಗಳನ್ನು ಬಳಿಸಿದರು.

Australia Open 2023: PV Sindhu, Kidambi Srikanth and Priyanshu Rajawat enter quarter finals

ಕ್ವಾರ್ಟರ್‌ಫೈನಲ್‌ನಲ್ಲಿ ಐದನೇ ಸೀಡನ್‌ನ ಸಿಂಧು ನಾಲ್ಕನೇ ಸೀಡ್‌ನ ಯುಎಸ್‌ಎ ಆಟಗಾರ್ತಿ ಬೈವೆನ್ ಜಾಂಗ್ ಅವರನ್ನು ಎದುರಿಸಲಿದ್ದಾರೆ. ಸಿಂಧು ಮತ್ತು ಜಾಂಗ್ ಕೊನೆಯ ಬಾರಿಗೆ 2020ರಲ್ಲಿ ಮೂಖಾಮುಖಿಯಾಗಿದ್ದು ಭಾರತದ ಆಟಗಾರ್ತಿ ಯುಎಸ್‌ಎ ಶಟ್ಲರ್ ವಿರುದ್ಧ ಹೆಡ್ ಟು ಹೆಡ್ ಮುಖಾಮುಖಿಯಲ್ಲಿ 6-4 ಅಂತರದ ಮುನ್ನಡೆ ಪಡೆದುಕೊಂಡಿದ್ದಾರೆ.

ಜಾಂಗ್ ಪ್ರಸ್ತುತ ಉತ್ತಮ ಲಯದಲ್ಲಿದ್ದರೆ ಸಿಂಧು ಸತತವಾಗಿ ವೈಫಲ್ಯ ಅನುಭವಿಸಿಕೊಂಡು ಬಂದಿದ್ದಾರೆ. ಜಪಾನ್ ಓಪನ್, ಕೊರಿಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದ್ದ ಸಿಂಧು ಆಸ್ಟ್ರೇಲಿಯಾ ಓಪನ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡು ಮುನ್ನುಗ್ಗುವ ವಿಶ್ವಾಸ ಮೂಡಿಸಿದ್ದಾರೆ.

ಇನ್ನು ಕಿಡಂಬಿ ಶ್ರೀಕಾಂತ್ ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಆಸ್ಟ್ರೇಲಿಯಾ ಓಪನ್‌ನ ಕ್ವಾರ್ಟ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಚೈನೀಸ್ ತೈಪೆಯ ಸು ಲಿ ಯಂಗ್ ಅವರನ್ನು ಎರಡನೇ ಸುತ್ತಿನಲ್ಲಿ ನೇರ ಸೆಟ್‌ಗಳ ಅಂತರದಿಂದ ಮಣಿಸಿ ಗೆಲುವು ಸಾಧಿಸಿದರು. ಈ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಮತ್ತೊಂದೆಡೆ 2023ರ ಪ್ರವಾಸದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪ್ರಿಯಾನ್ಶು ರಜವತ್ ತನಗಿಂತ ಉನ್ನತ ಶ್ರೇಯಾಂಕದ ಚೈನೀಸ್ ತೈಪೆಯ ವಾಂಗ್ ತ್ಸು ವೈ ಅವರನ್ನು ಎದುರಿಸಲಿದ್ದಾರೆ. 59 ನಿಮಿಷಗಳ ಕಾಲ ನಡೆದ ಈ ಪೈಪೋಟಿಯ ಪಂದ್ಯದಲ್ಲಿ ಪ್ರಿಯಾನ್ಶು 21-8, 13-21, 21-19 ಅಂತರದಿಂದ ಗೆಲುವು ಸಾಧಿಸಿದರು. ಗಮನಾರ್ಹ ಅಂಶವೆಂದರೆ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಿಯಾನ್ಶು ರಜವತ್ ಹಾಗೂ ಕಿಡಂಬಿ ಶ್ರೀಕಾಂತ್ ಮುಖಾಮುಖಿಯಾಗಲಿದ್ದಾರೆ.

ಮತ್ತೊಂದೆಡೆ ವಿಶ್ವದ ನಂ.50ನೇ ಶ್ರೇಯಾಂಕದ ಆಟಗಾರ ಮಿಥುನ್ ಮಂಜುನಾಥ್ ಅವರು ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಅದ್ಭುತ ಹೋರಾಟ ನಡೆಸಿ ಸೋಲು ಅನುಭವಿಸಿದ್ದಾರೆ. ಆರಂಭಿಕ ಸುತ್ತಿನಲ್ಲಿ ವಿಶ್ವದ ಏಳನೇ ಶ್ರೇಯಾಂಕದ ಸಿಂಗಾಪುರದ ಕೀನ್ ಯೂ ಲೋಹ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದ ಭಾರತದ ಶಟರ್ ಎರಡನೇ ಸುತ್ತಿನಲ್ಲಿ 13-21, 21-12, 19-21 ಅಂತರದಿಂದ ಸೋಲು ಕಂಡಿದ್ದಾರೆ.

Story first published: Thursday, August 3, 2023, 16:58 [IST]
Other articles published on Aug 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+