Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲೀ ಚಾಂಗ್‌ರಿಂದ ವಿಶ್ವ ಚಾಂಪಿಯನ್‌ಷಿಪ್ ಕಿತ್ತುಕೊಂಡ ಕ್ಯಾನ್ಸರ್ ಖಾಯಿಲೆ!

Badminton’s Lee Chong Wei to miss World Championship after cancer

ಕೌಲಾಲಂಪುರ್, ಮೇ 8: ಬ್ಯಾಡ್ಮಿಂಟನ್ ಸ್ಟಾರ್ ಲೀ ಚಾಂಗ್ ವೈ ಅವರು ಆಗಸ್ಟ್‌ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್‌ಷಿಪ್‌ನ ಅವಕಾಶ ಕಳೆದುಕೊಳ್ಳಲಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವುದರಿಂದ ಚಾಂಗ್ ವೈ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಕೆಳ ಕುಸಿಯಲಾರಂಭಿಸಿದ್ದಾರೆ. ಹೀಗಾಗಿ ವಿಶ್ವ ಚಾಂಪಿಯನ್‌ಷಿಪ್‌ ಗೆಲ್ಲುವ ಅವಕಾಶವೂ ಅವರ ಕೈ ತಪ್ಪುವುದರಲ್ಲಿದೆ.

ಅನಾರೋಗ್ಯದ ಕಾರಣ ಸುದೀರ್ಘ ಕಾಲಾವಧಿಯಲ್ಲಿ ಅನೇಕ ಪ್ರಮುಖ ಪಂದ್ಯಗಳಿಂದ ಲೀ ಚಾಂಗ್ ವೈ ಅನಿವಾರ್ಯವಾಗಿ ಹೊರಗುಳಿಯಬೇಕಾಗಿತ್ತು. ಇದರರ್ಧ ಮಾಜಿ ವಿಶ್ವ ನಂ.1 ಆಟಗಾರ ಚಾಂಗ್ ವೈ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ.

ಮೂಗಿನ ಕ್ಯಾನ್ಸರ್‌ಗೆ ತುತ್ತಾಗಿರುವ ಚಾಂಗ್ ವೈ ಪ್ರಮುಖ ಪಂದ್ಯಗಳನ್ನು ಆಡದೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಳ್ಳದಿದ್ದರೆ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಮಹಾಮಾರಿ ಕ್ಯಾನ್ಸರ್‌ಗೆ ಅಪ್ರತಿಮ ಆಟಗಾರ ಮಂಕಾಗುತ್ತಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಮಲೇಷ್ಯಾದ (ಬಿಎಎಮ್) ಪ್ರಧಾನ ವ್ಯವಸ್ಥಾಪಕ ಮಿಚೆಲ್ ಚಾಯ್, 'ಸದ್ಯ ಲೀ ಪುರುಷರ ವಿಶ್ವ ಶ್ರೇಯಾಂಕದಲ್ಲಿ 113ನೇ ಸ್ಥಾನದಲ್ಲಿರುವುದರಿಂದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಗಸ್ಟ್‌ನಿಂದ ಆರಂಭಗೊಳ್ಳಲಿರುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ' ಎಂದು ಮಾಹಿತಿ ನೀಡಿದ್ದಾರೆ.

Story first published: Wednesday, May 8, 2019, 16:34 [IST]
Other articles published on May 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+