ಜಪಾನ್ ಓಪನ್ ನಿಂದ ವಿಶ್ವದ ನಂ.1 ಆಟಗಾರ್ತಿ ಔಟ್
ಟೋಕಿಯೋ, ಸೆ.10: ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಜಪಾನ್ ಓಪನ್ ಸೂಪರ್ ಸೀರಿಸ್ ನಿಂದ ಹೊರ ಬಿದ್ದಿದ್ದಾರೆ. ಜಪಾನಿನ ಮಿನಾತ್ಸು ಮಿತಾನಿ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುವಾರ ನೇರ ಸೆಟ್ ಗಳಿಂದ ಸೈನಾ ಪರಾಭಾವ ಅನುಭವಿಸಿದ್ದಾರೆ.
ಸುಮಾರು 275,000 ಯುಎಸ್ ಡಾಲರ್ ಮೊತ್ತದ ಬಹುಮಾನವುಳ್ಳ ಜಪಾನ್ ಓಪನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ, ಹಾಲಿ ವಿಶ್ವದ ನಂ.1 ಆಟಗಾರ್ತಿ ಸೈನಾ 21-13, 21-16 ಸೆಟ್ ಗಳ ಅಂತರದಲ್ಲಿ ಕೇವಲ 40 ನಿಮಿಷಗಳ ಆಟದಲ್ಲಿ ಸೋಲು ಕಂಡಿದ್ದಾರೆ.

ಸೈನಾ ಸೋಲಿನೊಂದಿಗೆ ಭಾರತದ ಸ್ಪರ್ಧೆ ಕೂಡಾ ಮುಕ್ತಾಯವಾಗಿದೆ. ಪಿವಿ ಸಿಂಧು ಅವರು ಬುಧವಾರವೇ ಟೂರ್ನಿಯಿಂದ ಹೊರನಡೆದಿದ್ದರು.
ಪುರುಷರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಎಚ್ ಎಚ್ ಪ್ರಣೊಯ್ ಅವರು 9-21, 16-21 ಅಂತರದಲ್ಲಿ ದಕ್ಷಿಣ ಕೊರಿಯಾದ ಲಿಯೋ ದೊಂಗ್ ಕಿಯೂನ್ ವಿರುದ್ಧ 43 ನಿಮಿಷಗಳಲ್ಲಿ ಸೋಲು ಅನುಭವಿಸಿದರು. (ಐಎಎನ್ ಎಸ್)
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Saina Nehwal out of Japan Open
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications