ವರ್ಲ್ಡ್ ಟೂರ್ ಫೈನಲ್ಸ್: ಗೆಲುವಿನೋಟದಲ್ಲಿರುವ ಸಿಂಧು ಸೆಮಿಫೈನಲ್‌ಗೆ ಲಗ್ಗೆ

ಗುವಾಂಗ್ಝೌ, ಡಿಸೆಂಬರ್ 14: ಚೀನಾದ ಗುವಾಂಗ್ಝೌನಲ್ಲಿ ನಡೆಯುತ್ತಿರುವ ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಗೆಲುವಿನ ಓಟ ಮುಂದುವರೆಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಬೀವೆನ್ ಝಾಂಗ್ ಸೋಲಿಸಿರುವ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಶುಕ್ರವಾರ (ಡಿಸೆಂಬರ್ 14) ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು, ಅಮೆರಿಕಾದ ಆಟಗಾರ್ತಿ ಬೀವೆನ್ ಅವರನ್ನು 21-9, 21-15ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಟೂರ್ನಿಯಲ್ಲಿ ಗ್ರೂಪ್ 'ಎ'ಯಲ್ಲಿರುವ ಸಿಂಧು, ಇದು ಸತತ ಮೂರನೇ ಜಯ ಕಂಡಂತಾಗಿದೆ.
ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದ ಸಿಂಧು, ವಿಶ್ವ ನಂ.1 ಆಟಗಾರ್ತಿ ತೈ ಝು ಯಿಂಗ್ ಅವರೆದುರು ಪಾರಮ್ಯ ಮೆರೆದಿದ್ದರು. ಅದಕ್ಕೂ ಮುನ್ನ ವಿಶ್ವ ನಂ.2 ಆಟಗಾರ್ತಿ, ಹಾಲಿ ಚಾಂಪಿಯನ್ ಅಕೆನೆ ಯಮಾಗುಚಿ ಅವರನ್ನು ಸೋಲಿಸಿದ್ದರು!
Story first published: Friday, December 14, 2018, 18:25 [IST]
Other articles published on Dec 14, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications