ಚೀನಾ ಓಪನ್ 2023: ಮೊದಲ ಸುತ್ತಿನಲ್ಲೇ ಹೊರಬಿದ್ದ ಪ್ರಣಯ್, ಲಕ್ಷ್ಯ ಸೇನ್, ಪ್ರಿಯಾನ್ಶು
ಚೀನಾ ಓಪನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳು ಮೊದಲ ದಿನವೇ ಭಾರೀ ನಿರಾಸೆ ಪ್ರದರ್ಶನ ನೀಡಿ ಬೇಸರ ಮೂಡಿಸಿದ್ದಾರೆ. ಚೀನಾದ ಚಾಂಗ್‌ಜೌನಲ್ಲಿ ಆರಂಭವಾದ ಸೂಪರ್ 1000 ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿರುವ ಸೇರಿದಂತೆ ಪ್ರಮುಖರು ಸೋತು ಹೊರಬಿದ್ದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೂ ಮುನ್ನ ಈ ರೀತಿಯ ಪ್ರದರ್ಶನ ಈಗ ಭಾರತೀಯ ಅಭಿಮಾನಿಗಳ ಪಾಳಯದಲ್ಲಿ ಕಳವಳ ಮೂಡಿಸಿದೆ.
ಗಮನಾರ್ಹ ಅಂಶವೆಂದರೆ 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಮಾಜಿ ವಿಶ್ವ ನಂ. 1 ಆಟಗಾರ ಕಿಡಂಬಿ ಶ್ರೀಕಾಂತ್ ಕಳಪೆ ಫಾರ್ಮ್‌ನ ಕಾರಣದಿಂದಾಗಿ ಏಷ್ಯನ್ ಗೇಮ್ಸ್‌ಗೆ ತಯಾರಿಗೆ ಸಮಯ ಪಡೆಯುವ ದೃಷ್ಟಿಯಿಂದ ಚೀನಾ ಓಪನ್‌ನಿಂದ ಹಿಂದೆ ಸರಿದಿದ್ದಾರೆ.

ಕಳೆದ ತಿಂಗಳು ಕೋಪನ್‌ಹೇಗನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿನ ಯಶಸ್ಸಿನಿಂದ ಗಮನಸೆಳೆದಿರುವ ಎಚ್‌ಎಸ್ ಪ್ರಣಯ್ ಚೀನಾ ಓಪನ್‌ನಲ್ಲಿ ಆಘಾತ ಅನುಭವಿಸಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು ಎದಿರಿಸಿದ ಪ್ರಣಯ್ ಮೂರು ಗೇಮ್‌ಗಳಲ್ಲಿ ಸೋತು ಆಘಾತಕಾರಿಯಾಗಿ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ. ವಿಶ್ವದ ಆರನೇ ಶ್ರೇಯಾಂಕದ ಭಾರತೀಯ ಆಟಗಾರ ಒಂದು ಗಂಟೆ ಆರು ನಿಮಿಷಗಳ ಕಾಲ ಸೆಣೆಸಾಡಿದ್ದು 12-21, 21-13, 18-21 ಅಂತರದಿಂದ ಮಲೇಷ್ಯಾ 22ನೇ ಶ್ರೇಯಾಂಕದ ಆಟಗಾರನ ವಿರುದ್ಧ ಸೋತರು.
ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸೆನ್ ವಿರುದ್ಧ ಸೋಲಿನ ರುಚಿ ಕಂಡಿದ್ದಾರೆ. ಮೂರು ಗೇಮ್‌ಗಳಲ್ಲಿ ಲಕ್ಷ್ಯ ಸೇನ್ 21-23, 21-16, 9-21 ಅಂತರದಿಂದ ಸೋತಿದ್ದು ಒಂದು ಗಂಟೆ 18 ನಿಮಿಷಗಳಲ್ಲಿ ಪಂದ್ಯ ಮುಗಿಸಿ ಹೋರಾಟ ಅಂತ್ಯಗೊಳಿಸಿದ್ದಾರೆ.
ಮತ್ತೊಂದೆಡೆ ಪ್ರಿಯಾಂಶು ರಾಜಾವತ್ 13-21, 24-26 ರಿಂದ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ ಸೋಲು ಕಂಡಿದ್ದಾರೆ. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications