For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಘೋಷಿಸಿದ ಚೈನೀಸ್ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ಲಿನ್ ಡಾನ್

Chinese badminton superstar Lin Dan announces retirement

ಬೀಜಿಂಗ್, ಜುಲೈ 4: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ಚೀನಾದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಿನ್‌ ಡಾನ್ ಅವರು ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರನೆನಿಸಿದ್ದ 36ರ ಹರೆಯದ ಲಿನ್ ಶನಿವಾರ ನಿವೃತ್ತಿ ಘೋಷಿಸಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್ ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಬಂಗಾರ ಗೆದ್ದಿದ್ದ ಲಿನ್ ಡಾನ್ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಸಲಿಗೆ 2020ರಂದು ನಡೆಸಲು ಉದ್ದೇಶಿಸಲಾಗಿದ್ದ ಟೋಕಿಯೋ ಒಲಿಂಪಿಕ್ಸ್, ಕೊರೊನಾ ವೈರಸ್ ಕಾರಣದಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದೆ.

ಕಳೆದ ವರ್ಷ ಲಿನ್ ಡಾನ್ ಅವರ ಬದ್ಧ ಎದುರಾಳಿ, ಸ್ನೇಹಿತ ಮಲೇಷ್ಯಾದ ಸ್ಟಾರ್ ಶೆಟ್ಲರ್ ಲೀ ಚೊಂಗ್ ವೀ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಬ್ಯಾಡ್ಮಿಂಟನ್‌ ಲೋಕದಲ್ಲಿ ಮಿನುಗಿದ್ದ ಲಿನ್ ಡಾನ್ ವೃತ್ತಿ ಬದುಕೂ ಕಳೆಗುಂದುತ್ತಾ ಬಂದಿತ್ತು.

'ನಾನು ಪ್ರೀತಿಸುವ ಕ್ರೀಡೆಗೆ ಎಲ್ಲವನ್ನೂ ಅರ್ಪಿಸಿದ್ದೇನೆ. ನಾನು ಗೆದ್ದು ಬೀಗಿದಾಗ, ಸೋತು ಕುಸಿದಾಗೆಲ್ಲ ನನ್ನ ಕುಟುಂಬಸ್ಥರು, ತರಬೇತುದಾರರು, ತಂಡದ ಸದಸ್ಯರು ಮತ್ತು ಅಭಿಮಾನಿಗಳು ನನ್ನ ಜೊತೆಗಿದ್ದರು,' ಎಂದು ನಿವೃತ್ತಿ ಘೋಷಿಸುವಾಗ ಡಾನ್ ಹೇಳಿರುವುದಾಗಿ ಚೈನೀಸ್ ಮಾದ್ಯಮಗಳು ವರದಿ ಮಾಡಿವೆ.

Story first published: Saturday, July 4, 2020, 12:41 [IST]
Other articles published on Jul 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+