For Quick Alerts
ALLOW NOTIFICATIONS  
For Daily Alerts

ಡೆನ್ಮಾರ್ಕ್ ಓಪನ್: ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಕಿದಂಬಿ ಶ್ರೀಕಾಂತ್‌

Denmark Open: Kidambi Srikanth loses in quarterfinals

ನವದೆಹಲಿ: ಒಡೆನ್ಸ್‌ನಲ್ಲಿ ಶುಕ್ರವಾರ (ಅಕ್ಟೋಬರ್ 16) ನಡೆದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಕಿದಂಬಿ ಶ್ರೀಕಾಂತ್ ಸೋಲನುಭವಿಸಿದ್ದಾರೆ. ತೈವಾನ್ ಆಟಗಾರ ಚೌ ಟಿಯೆನ್-ಚೆನ್ ಎದುರು ಶ್ರೀಕಾಂತ್ ಹಿನ್ನಡೆ ಅನುಭವಿಸಿದ್ದಾರೆ. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಶ್ವ ನಂ.14ರ ಕಿದಂಬಿ ಶ್ರೀಕಾಂತ್ ಅವರು ವಿಶ್ವ ನಂ.2ರ ಆಟಗಾರ ಚೌ ಟಿಯೆನ್-ಚೆನ್ ವಿರುದ್ಧ 22-20, 13-21, 16-21ರ ಸೋಲು ಕಂಡಿದ್ದಾರೆ. ಇಬ್ಬರ ಮಧ್ಯೆ ಸುಮಾರು 61 ನಿಮಿಷಗಳ ಕದನ ನಡೆಯಿತು.

ಶ್ರೀಕಾಂತ್ ಪಂದ್ಯದಲ್ಲಿ ಸೋತು ನಿರ್ಗಮಿಸಬೇಕಾಯಿತಾದರೂ ಎದುರಾಳಿಗೆ ಫೈಪೋಟಿಯಂತೂ ನೀಡಿದ್ದು ಕಂಡುಬಂತು. ಮುಖ್ಯವಾಗಿ ಆರಂಭಿಕ ಸೆಟ್ ಜಯಿಸಿದ್ದ ಶ್ರೀಕಾಂತ್ ಮುಂದಿನ ಸೆಟ್‌ಗಳಲ್ಲಿ ಬಲಿಷ್ಠ ಆಟಗಾರ ಟಿಯೆನ್-ಚೆನ್ ಎದುರು ತಲೆ ಬಾಗಲೇಬೇಕಾಯ್ತು.

ಮಾಜಿ ವಿಶ್ವ ನಂ.1 ಆಟಗಾರಾಗಿರುವ ಕಿದಂಬಿ ಶ್ರೀಕಾಂತ್ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯಾ ಟೂರ್ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಟೂರ್ನಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.

Story first published: Saturday, October 17, 2020, 10:36 [IST]
Other articles published on Oct 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+