ಡೆನ್ಮಾರ್ಕ್ ಓಪನ್: ಯಮಾಗುಚಿ ಸೋಲಿಸಿದ ಸೈನಾ ಕ್ವಾರ್ಟರ್ ಫೈನಲ್ ಗೆ

ಒಡೆನ್ಸ್, ಅಕ್ಟೋಬರ್ 18: ಒಡೆನ್ಸ್ ನಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಕೆನೆ ಯಮಾಗುಚಿ ಅವರನ್ನು ಸೋಲಿಸುವ ಮೂಲಕ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕ್ವಾರ್ಟರ್ ಪೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಗುರುವಾರ (ಅಕ್ಟೋಬರ್ 18) ನಡೆದ ಮಹಿಳಾ ಸಿಂಗಲ್ಸ್ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸೈನಾ, ಜಪಾನ್ ನ ಯಮಾಗುಚಿ ಅವರನ್ನು 21-15, 21-17ರ ನೇರ ಸೆಟ್ ನಿಂದ ಸೋಲಿಸುವ ಮೂಲಕ ಸುಲಭ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸೈನಾ, ಹಾಂಕಾಂಗ್ ನ ಚೆಯುಂಗ್ ನೈಗನ್ ಯಿ ವಿರುದ್ಧ ಗೆದ್ದಿದ್ದರು.
ಆರಂಭಿಕ ಸುತ್ತಿನಲ್ಲಿ ಜಯ ಸಾಧಿಸಿದ್ದರಿಂದ ದ್ವಿತೀಯ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಿಂದಲೇ ಕಣಕ್ಕಿಳಿದ ಮಾಜಿ ವಿಶ್ವ ನಂ. 1 ಆಟಗಾರ್ತಿ ಸೈನಾ, ವಿಶ್ವ ನಂ. 2ನ ಜಪಾನ್ ಬಲಾಡ್ಯೆ ಅಕೆನೆಗೆ ಸೋಲುಣಿಸಿದರು. ಭಾರತದ ಮತ್ತೊಬ್ಬ ಆಟಗಾರ್ತಿ ಸಿಂಧು, ಮೊದಲ ಪಂದ್ಯದಲ್ಲೇ ಶ್ರೇಯಾಂಕಿತರಲ್ಲದ ಅಮೆರಿಕಾ ಆಟಗಾರ್ತಿ ಬೀವೆನ್ ಝಾಂಗ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications