ಡೆನ್ಮಾರ್ಕ್ ಓಪನ್: ಆರಂಭಿಕ ಪಂದ್ಯದಲ್ಲೇ ಸಿಂಧುಗೆ ಆಘಾತವಿತ್ತ ಅಶ್ರೇಯಾಂಕಿತೆ!

ಒಡೆನ್ಸ್, ಅಕ್ಟೋಬರ್ 16: ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದ್ದಾರೆ. ಅದೂ ಶ್ರೇಯಾಂಕಿತರಲ್ಲದ ಆಟಗಾರ್ತಿ ಬೀವೆನ್ ಝಾಂಗ್ ವಿರುದ್ಧ ಸಿಂಧು ಸೋಲನುಭವಿಸಿದ್ದಾರೆ.
ಮಂಗಳವಾರ (ಅಕ್ಟೋಬರ್ 16)ರಂದು ನಡೆದ ಮಹಿಳಾ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಅಮೆರಿಕಾದ ಬೀವೆನ್ ವಿರುದ್ಧ 17-21, 21-16, 18-21ರ ಹಿನ್ನಡೆ ಅನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಸಿಂಧುವಿನ ಸವಾಲು ಅಂತ್ಯಗೊಂಡಿದೆ.
ಪಂದ್ಯಾರಂಭದಿಂದಲೂ ಬೀವೆನ್ ಝಾಂಗ್, ಭರ್ಜರಿ ಪೈಪೋಟಿ ನೀಡುತ್ತ ಸಿಂಧುವನ್ನು ಒತ್ತಡಕ್ಕೀಡು ಮಾಡಿದರು. ದ್ವಿತೀಯ ಸೆಟ್ ಗೆದ್ದುಕೊಳ್ಳುವ ಮೂಲಕ ಸಿಂಧು ಪ್ರತಿರೋಧ ವ್ಯಕ್ತಪಡಿಸಿದರೂ ಅಂತಿಮವಾಗಿ ಅಮೆರಿಕಾ ಆಟಗಾರ್ತಿಗೆ ಶರಣಾದರು. ಭಾರತದ ಪ್ರಶಸ್ತಿ ಕನಸು ಇನ್ನು ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಫಲಿತಾಂಶದ ಮೇಲೆ ನಿಂತಿದೆ.
Story first published: Tuesday, October 16, 2018, 18:46 [IST]
Other articles published on Oct 16, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications