Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ 2022: ವಿಶ್ವದ ನಂ.1 ಜೊಕೊವಿಕ್ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ನಡಾಲ್

French Open 2022: Rafael Nadal defeats Novak Djokovic in quarter final and enters to semi final

ಪ್ರಸ್ತುತ ನಡೆಯುತ್ತಿರುವ ಫ್ರೆಂಚ್ ಓಪನ್ 2022ರ ಟೂರ್ನಿಯ ಕ್ವಾಲಿಫೈಯರ್ ಪಂದ್ಯ ಇಂದು ( ಜೂನ್ 1 ) ನಡೆದಿದ್ದು, ಈ ಪಂದ್ಯದಲ್ಲಿ ಟೆನಿಸ್ ಲೋಕದ ದಿಗ್ಗಜರಾದ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಮುಖಾಮುಖಿಯಾದರು ಹಾಗೂ ಕ್ಲೇ ಕೋರ್ಟ್ ಕಿಂಗ್ ಎಂದೇ ಖ್ಯಾತಿಯನ್ನು ಪಡೆದಿರುವ ರಾಫೆಲ್ ನಡಾಲ್ 6-2, 4-6, 6-2 ಮತ್ತು 7-6 ( 4 ) ಸೆಟ್‌ಗಳ ಅಂತರದಿಂದ ನೊವಾಕ್ ಜೊಕೊವಿಕ್ ವಿರುದ್ಧ ಗೆದ್ದು ಸೆಮಿಫೈನಲ್ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಮೊದಲನೇ ಸುತ್ತಿನಲ್ಲಿ ಸ್ಪೇನ್‍ನ ರಾಫೆಲ್ ನಡಾಲ್ ಮುನ್ನಡೆ ಸಾಧಿಸಿದರೆ, ನೊವಾಕ್ ಜೊಕೊವಿಕ್ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು. ನಂತರ ಮೂರನೇ ಸುತ್ತಿನಲ್ಲಿ ಮತ್ತೆ 6-2 ಸೆಟ್‌ಗಳ ಅಂತರದಲ್ಲಿ ಗೆದ್ದು ಮುನ್ನಡೆಯನ್ನು ಸಾಧಿಸಿದ ರಾಫೆಲ್ ನಡಾಲ್ ಹಣಾಹಣಿಯಲ್ಲಿ ಮೇಲುಗೈ ಸಾಧಿಸಿದರು. ನಾಲ್ಕನೇ ಸುತ್ತಿನಲ್ಲಿ ವಿಶ್ವದ ನಂಬರ್ 1 ನೊವಾಕ್ ಜೊಕೊವಿಕ್ ಪ್ರಬಲ ಆರಂಭವನ್ನು ಪಡೆದುಕೊಂಡರು, ಆದರೆ ಸರ್ವ್ ಮಾಡುವುದನ್ನು ನಿರಾಕರಿಸಿದ ನಡಾಲ್ 2 ಅಂಕಗಳನ್ನು ಉಳಿಸಿ ಏಕಪಕ್ಷೀಯ ಟೈ ಬ್ರೇಕ್‌ನಲ್ಲಿ ಗೆದ್ದು ಬೀಗಿದರು.

ಹೀಗೆ ತನ್ನ ಹುಟ್ಟುಹಬ್ಬಕ್ಕೆ 3 ದಿನಗಳು ಬಾಕಿ ಇರುವ ಮುನ್ನ ಬೃಹತ್ ಗೆಲುವು ಕಂಡಿರುವ ರಾಫೆಲ್ ನಡಾಲ್ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಎದುರಿಸಲಿದ್ದಾರೆ.

2006ರ ಫ್ರೆಂಚ್ ಓಪನ್ ಟೂರ್ನಿಯಿಂದ ಈ ಇಬ್ಬರು ದಿಗ್ಗಜರು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯ ಇಬ್ಬರ ನಡುವೆ ನಡೆದ ಹತ್ತನೇ ಫ್ರೆಂಚ್ ಓಪನ್ ಮುಖಾಮುಖಿಯಾಗಿದೆ. ಇನ್ನು ರಾಫೆಲ್ ನಡಾಲ್ ಈ ಮುಖಾಮುಖಿಯಲ್ಲಿ ಸಾಧಿಸಿದ ಎಂಟನೇ ಗೆಲುವು ಇದಾಗಿದ್ದು, 2 ಪಂದ್ಯಗಳಲ್ಲಿ ಮಾತ್ರ ನೊವಾಕ್ ಜೊಕೊವಿಕ್ ಗೆದ್ದಿದ್ದಾರೆ. ಇನ್ನು ಇಬ್ಬರ ನಡುವಿನ 59ನೇ ಹಣಾಹಣಿ ಇದಾಗಿದ್ದು, ಜೊಕೊವಿಕ್ 30 ಹಣಾಹಣಿಯಲ್ಲಿ ಗೆದ್ದಿದ್ದರೆ, ನಡಾಲ್ 29 ಜಯ ಕಂಡಿದ್ದಾರೆ.

ಈಗಾಗಲೇ 13 ಬಾರಿ ಫ್ರೆಂಚ್ ಓಪನ್ ಟೂರ್ನಿ ಗೆದ್ದಿರುವ ರಾಫೆಲ್ ನಡಾಲ್ 14ನೇ ಟೈಟಲ್ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ.

Story first published: Wednesday, June 1, 2022, 9:55 [IST]
Other articles published on Jun 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+