ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಫೈನಲ್‌ ಹಂತಕ್ಕೇರಿದ ಸಾತ್ವಿಕ್- ಚಿರಾಗ್ ಜೋಡಿ

French Open Badminton: Indian pair Satwiksairaj Rankireddy & Chirag Shetty pair enters Final

ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್‌ ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಏಳನೇ ಶ್ರೇಯಾಂಕದ ಭಾರತದ ಜೋಡಿ ದಕ್ಷಿಣ ಕೊರಿಯಾದ ಶ್ರೇಯಾಂಕ ರಹಿತ ಚೋಯ್ ಸೋಲ್-ಗ್ಯು ಮತ್ತು ಕಿಮ್ ವಾನ್-ಹೊ ಅವರನ್ನು ಸೆಮಿಫೈನಲ್‌ನಲ್ಲಿ 21-18 21-14 ರಿಂದ ಸೋಲಿಸಿದರು.

ಈ ಗೆಲುವಿನಿಂದಿಗೆ ಫೈನಲ್‌ಗೆ ಪ್ರವೇಶವನ್ನು ಪಡೆದುಕೊಂಡಿರುವ ಭಾರತದ ಜೋಡಿ BWF 750 ಈವೆಂಟ್‌ನ ಫೈನಲ್‌ಗೆ ಪ್ರವೇಶಿಸಿದ ಮೊದಲ ಬಾರಿಗೆ ಭಾರತೀಯ ಜೋಡಿ ಎನಿಸಿಕೊಂಡಿದ್ದಾರೆ. ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಮತ್ತೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಮತ್ತು ಚೈನೀಸ್ ತೈಪೆಯ ಲು ಚಿಂಗ್ ಯಾವೋ ಮತ್ತು ಯಾಂಗ್ ಪೊ ಹಾನ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದ್ದಾರೆ.

ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!ನವಾಜ್ ಹಾಕಿದ ಚೆಂಡು ತಿರುಗಿ ಪ್ಯಾಡ್‌ಗೆ ಬಡಿದಿದ್ದರೆ ಏನಾಗುತ್ತಿತ್ತು?: ನಿವೃತ್ತಿಯ ಉತ್ತರ ಕೊಟ್ಟ ಅಶ್ವಿನ್!

ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸಾಖಷ್ಟು ಪೈಪೋಟಿಯನ್ನು ಎದುರಿಸಿದ್ದರು. ಏಳನೇ ಶ್ರೇಯಾಂಕದ ಜೋಡಿ ಜಪಾನ್‌ನ ಅಗ್ರ ಶ್ರೇಯಾಂಕದ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ಅವರನ್ನು 23-21, 21-18 ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿದ್ದರು. ಈ ಗೆಲುವಿನ ಬಳಿಕ ಸೆಮಿಫೈನಲ್ ಸೆಣೆಸಾಟದಲ್ಲಿ ದಕ್ಷಿಣ ಕೊರಿಯಾದ ಶ್ರೇಯಾಂಕರಹಿತ ಚೋಯ್ ಸೋಲ್-ಗ್ಯು ಮತ್ತು ಕಿಮ್ ವಾನ್-ಹೊ ಜೋಡಿಯನ್ನು ಎದುರಿದ್ದಾರೆ.

ಕ್ವಾರ್ಟರ್‌ಫೈನಲ್‌ನ್ಲಲಿ ಪಂದ್ಯದ ಆರಂಭದಲ್ಲಿಯೇ ಉತ್ತಮ ಹೋರಾಟವನ್ನು ಪ್ರದರ್ಶಿಸುವ ಮೂಲಕ ಪೈಪೋಟಿ ನಡೆಯಿತು. ಭಾರತದ ಜೋಡಿಯು ವಿರಾಮದ ವೇಳೆಗೆ 11-9 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಮೊದಲ ಗೇಮ್‌ನ ದ್ವಿತೀಯಾರ್ಧದಲ್ಲಿ ಜಪಾನ್ ಜೋಡಿ ಕಠಿಣ ಹೋರಾಟ ನೀಡಿತಾದರೂ ಭಾರತೀಯ ಜೋಡಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಇನ್ನು ಎರಡನೇ ಗೇಮ್ ಕೂಡ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಪಾಯಿಂಟ್ 7-7 ಆಗಿದ್ದಾಗ ಸತತ ಮೂರು ಅಂಕಗಳನ್ನು ಗಳಿಸಿ ಜಪಾನ್ ಜೋಡಿ ಮೇಲುಗೈ ಸಾಧಿಸಿತು.

ಈ ಮೂಲಕ ಭಾರತ ಆಟಗಾರರು 11-8 ಹಿನ್ನಡರೆ ಅನುಭವಿಸಿತ್ತು. ವಿರಾಮದ ಬಳಿಕ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಜೋಡಿ ಸತತ ಮೂರು ಅಂಕಗಳನ್ನು ಗಳಿಸಿದ ನಂತರ 15-15 ಸ್ಕೋರ್‌ಗಳನ್ನು ಸಮಬಲಗೊಳಿಸುವ ಮೂಲಕ ದ್ವಿತೀಯಾರ್ಧದಲ್ಲಿ ಪುನರಾಗಮನ ಮಾಡುವಲ್ಲಿ ಯಶಸ್ವಿಯಾದರು. ಅದಾದ ಬಳಿಕ ತೀವ್ರ ಪೈಪೋಟಿ ನಡೆಯಿತು. ಒಂದು ಹಂತದಲ್ಲಿ 18-18 ರಲ್ಲಿ ಸಮಬಲ ಸಾಧಿಸಿದ ಬಳಿಕ ಭಾರತದ ಜೋಡಿ ಮುಂದಿನ ಮೂರು ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿತು. ಈ ಮೂಲಕ 21-18 ಅಂಕಗಳಿಂದ ಎರಡನೇ ಸೆಟ್ ಕೂಡ ತನ್ನ ವಶಕ್ಕೆ ಪಡೆದು ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

Story first published: Sunday, October 30, 2022, 5:12 [IST]
Other articles published on Oct 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X