ಕ್ರಿಕೆಟ್ ನಲ್ಲಿ ಸಿಗದಿದ್ದರೆ ಏನು? ಸೈನಾ ನೆಹ್ವಾಲ್ ನಂಬರ್ 1
ನವದೆಹಲಿ, ಮಾ 28: ಭಾರತದ ಅಗ್ರ ಷಟ್ಲರ್ ಸೈನಾ ನೆಹ್ವಾಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೇರುವ ಮೂಲಕ ಸೈನಾ ದೇಶ ಹೆಮ್ಮೆಪಡುವಂತಹ ಕೆಲಸವನ್ನು ಮಾಡಿದ್ದಾರೆ.
ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎನ್ನುವ ಖ್ಯಾತಿಗಳಿಸಿರುವ ಸೈನಾ, ಚೀನಾದ ಆಟಗಾರ್ತಿಯನ್ನು ಹಿಂದಿಕ್ಕೆ ನಂಬರ್ ಒನ್ ಪಟ್ಟಕ್ಕೇರಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸೂಪರ್ ಸೀರೀಸ್ ಟೂರ್ನಿಯಲ್ಲಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಸ್ಪೈನ್ ದೇಶದ ಕರೋಲಿನ್ ಮಾರೀನ್ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಸೈನಾ ವಿಶ್ವದ ಅಗ್ರಸ್ಥಾನಕ್ಕೇರಿದ್ದಾರೆ.
ಭಾರತದ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯ ಹಂತ ತಲುಪಿದ್ದಾರೆ.
ಸೈನಾ ಫೈನಲ್ ತಲುಪಲು ಶನಿವಾರ (ಮಾ 28) ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಜಪಾನಿನ ಯುಯಿ ಹಶಿಮೋಟಾ ವಿರುದ್ದ ಗೆಲುವು ಸಾಧಿಸಬೇಕಿದೆ.
ಇನ್ನು ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಕ್ಸು ಸಾಂಗ್ ವಿರುದ್ದ ಸೆಣಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications