ಇಂಡಿಯಾ ಓಪನ್ 2021: ವಿಶ್ವದ ನಂಬರ್ 1 ಲೋ ಕಿಯಾನ್ ಯೂ ಮಣಿಸಿ ಟ್ರೋಫಿ ಗೆದ್ದ ಲಕ್ಷ್ಯ ಸೇನ್

ಇಂಡಿಯನ್ ಓಪನ್ ಬ್ಯಾಡ್ಮಿಂಟನ್‌ನ ಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಹಾಲಿ ವಿಶ್ವ ಚಾಂಪಿಯನ್ ಲೋ ಕಿಯಾನ್ ಯೂ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಪುರುಷರ ಸಿಂಗಲ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಟ್ರೋಫಿಗೆ ಲಕ್ಷ್ಯ ಸೇನ್ ಮುತ್ತಿಕ್ಕಿದ್ದಾರೆ. ಈ ಮೂಲಕ ಭವಿಷ್ಯದ ತಾರೆ ಎಂದು ಬಿಂಬಿತವಾಗಿರುವ ಸೇನ್ ಆ ನಿಟ್ಟಿನಲ್ಲಿ ದಾಪುಗಾಲಿಟ್ಟು ಮುನ್ನುಗ್ಗುತ್ತಿದ್ದಾರೆ. ಈ ಫೈನಲ್ ಪಂದ್ಯ 54 ನಿಮಿಷಗಳಲ್ಲಿ ಅಂತ್ಯವಾಗಿತ್ತು.
ಇದು ಭಾರತೀಯ ಶಟ್ಲರ್ ಲಕ್ಷ್ಯ ಸೇನ್ ಅವರ BWF ಟೂರ್‌ನ ಮೊದಲ ಸೂಪರ್ 500 ಟೈಟಲ್ ಆಗಿದೆ. ಇದಕ್ಕೂ ಮುನ್ನ 2021ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಹಂತದಲ್ಲಿ ಶ್ರೀಕಾಂತ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಬಳಿಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.
ಈ ಕಾದಾಟ ಲಕ್ಷ್ಯ ಸೇನ್ ಪಾಲಿಗೆ ಸುಲಭದ್ದಾಗಿರಲಿಲ್ಲ. ಮೊದಲ ಸೆಟ್‌ನಲ್ಲಿ ಲಕ್ಷ್ಯ ಸೇನ್ 16-11 ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ಲೋ ಮತ್ತೆ ಹೋರಾಟ ನಡೆಸಿ 19-19ರಲ್ಲಿ ಸಮಬಲ ಸಾಧಿಸಿದರು.ನಂತರ ಮತ್ತೆ ಲಕ್ಷ್ಯ ಸೇನ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. 24-22 ಅಂತರದಿಂದ ಮೊದಲ ಸೆಟ್ ಗೆದ್ದುಕೊಂಡರು.
ನಂತರ ಎರಡನೇ ಸೆಟ್ ಕೂಡ ಸಾಕಷ್ಟು ನಿಕಟ ಸ್ಪರ್ಧೆಯಿಂದ ಕೂಡಿತ್ತು. ಆದರೆ ನಂತರ ಎರಡು ಅಂಕಗಳನ್ನು ಸತತವಾಗಿ ಗೆದ್ದ ಬಳಿಕ ಲಕ್ಷ್ಯ ಸೇನ್ 19-17 ಅಂತರದಿಂದ ಮುನ್ನಡೆ ಸಾಧಿಸಿದರು. ಈ ಮುನ್ನಡೆ ಭಾರತೀಯ ಆಟಗಾರನ ಗೆಲುವಿನ ಹಾದಿಯನ್ನು ಸುಗಮಗೊಳಿಸಿತ್ತು.
ಇನ್ನು ಲಕ್ಷ್ಯ ಸೇನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮುನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾನುವಾರದಂದು ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಪಂದ್ಯಾವಳಿಯ ಅಂತಿಮ ದಿನದಂದು ಫೈನಲ್‌ನಲ್ಲಿ ಹೋರಾಡಿದ ಗೆದ್ದ ಎರಡನೇ ಭಾರತೀಯ ಪ್ರತಿನಿಧಿಯಾಗಿದ್ದಾರೆ ಲಕ್ಷ್ಯ ಸೇನ್. ಎರಡನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಂಡೋನೇಷ್ಯಾದ ಅಗ್ರ ಶ್ರೇಯಾಂಕದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಅವರನ್ನು 21-16, 26-24 ರಿಂದ ಸೋಲಿಸಿ ಚೊಚ್ಚಲ ಇಂಡಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications