ಇಂಡಿಯನ್ ಓಪನ್ : ಸೈನಾ ನೆಹ್ವಾಲ್ ವಿರುದ್ಧ ಸಿಂಧುಗೆ ಭರ್ಜರಿ ಜಯ
ನವದೆಹಲಿ, ಮಾರ್ಚ್ 31: ಭಾರತದ ಬಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ನಡೆದ ಮಹಾ ಸಮರದಲ್ಲಿ ಪಿವಿ ಸಿಂಧು ಅವರು ಮೇಲುಗೈ ಸಾಧಿಸಿ, ಭರ್ಜರಿ ಜಯ ಸಾಧಿಸಿದ್ದಾರೆ. ಇಂಡಿಯನ್ ಓಪನ್ ಸೂಪರ್ ಸೀರಿಸ್ ಬಾಡ್ಮಿಂಟನ್ ಕ್ವಾರ್ಟರ್ ಫೈನಲಿನಲ್ಲಿ ಸೈನಾ ನೆಹ್ವಾಲ್ ವಿರುದ್ಧ ಪಿವಿ ಸಿಂಧು ಅವರು ಶುಕ್ರವಾರದಂದು ಜಯ ದಾಖಲಿಸಿದ್ದಾರೆ.
ಶುಕ್ರವಾರದಂದು ನವದೆಹಲಿಯ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸಿಂಧು ಹಾಗೂ ಸೈನಾ ನಡುವೆ ಕಾದಾಟ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಎಚ್ ಡಿ 2 ಚಾನೆಲ್ ಗಳಲ್ಲಿ ನೇರ ಪ್ರಸಾರ ನೋಡಿದ ಪ್ರೇಕ್ಷಕರಿಗೆ ರೋಚಕ ಪಂದ್ಯದ ನಿರೀಕ್ಷೆಯಿತ್ತು.

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾರನ್ನು 21-16, 22-20ರಲ್ಲಿ 47 ನಿಮಿಷಗಳ ಅವಧಿಯಲ್ಲಿ ಸಿಂಧು ಸೋಲಿಸಿದರು.
2014ರಲ್ಲಿ ಸೈಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಸಿಂಧುರನ್ನು ಸೈನಾ ಸೋಲಿಸಿದ್ದರು. ಪಿಬಿಎಲ್ ನಲ್ಲಿ ಸೈನಾರನ್ನು ಸಿಂಧು ಸೋಲಿಸಿದ್ದರು. ವಿಶ್ವದ ನಂ. 5ನೇ ಶ್ರೇಯಾಂಕ ಸಿಂಧು ಅವರು ಮತ್ತೊಮ್ಮೆ ವಿಶ್ವದ ನಂ8 ಆಟಗಾರ್ತಿ ಸೈನಾರ ಮೇಲೆ ಮೇಲುಗೈ ಸಾಧಿಸಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ಅವರು, ಥಾಯ್ಲೆಂಡ್ ನ ಚೊಚುವಾಂಗ್ ವಿರುದ್ಧ 21-14,21-12 ಅಂತರದಲ್ಲಿ ಜಯಗಳಿಸಿದರೆ, ಸಿಂಧು ಜಪಾನ್ ನ ಸಯಿನಾ ಕವಕಾವಿ ವಿರುದ್ಧ 21-16, 23-21 ಅಂತರದಲ್ಲಿ ಗೆಲುವು ಪಡೆದಿದ್ದರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: India Open: Sindhu beats Saina in QF
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications