ನವದೆಹಲಿ, ಮಾರ್ಚ್ 31 : 2017 ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರಿಸ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ಶೆಟ್ಲರ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸೆಣಸಾಡಲಿದ್ದಾರೆ.
ಶುಕ್ರವಾರ ಮದ್ಯಾಹ್ನ 2 ಗಂಟೆಗೆ ನವದೆಹಲಿಯ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸಿಂಧು ಹಾಗೂ ಸೈನಾ ನಡುವೆ ಕಾದಾಟ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಎಚ್ ಡಿ 2 ಚಾನೆಲ್ ಗಳಲ್ಲಿ ನೇರ ಪ್ರಸಾರವಾಗಲಿದೆ.[ಸೈನಾ ನೆಹ್ವಾಲ್ ಮುಡಿಗೆ ಮಲೇಷ್ಯಾ ಮಾಸ್ಟರ್ ಗ್ರ್ಯಾನ್ ಪ್ರೀ ಗ್ಗೋಲ್ಡ್]

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ ಥಾಯ್ಲೆಂಡ್ ನ ಚೊಚುವಾಂಗ್ ವಿರುದ್ಧ 21-14,21-12 ಅಂತರದಲ್ಲಿ ಜಯಗಳಿಸಿದರೆ, ಸಿಂಧು ಜಪಾನ್ ನ ಸಯಿನಾ ಕವಕಾವಿ ವಿರುದ್ಧ 21-16, 23-21 ಅಂತರದಲ್ಲಿ ಗೆಲುವು ಪಡೆದರು.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಕಿದಾಂಬಿ ಶ್ರೀಕಾಂತ್, ಬಿ.ಸಾಯಿಪ್ರಣೀತ್ ಹಾಗೂ ಸೌರಭ್ ವರ್ಮಾ 2ನೇ ಸುತ್ತಿನಲ್ಲೇ ಪರಾಭವಗೊಂಡರು.