For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಡ್ಮಿಂಟನ್: ಸೆಮಿಫೈನಲ್ ನಲ್ಲಿ ಸೋಲು ಕಂಡ ಸೈನಾ

ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾಗೆ ಪರಾಭವ. ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ನ ನೊಝೋಮಿ ವಿರುದ್ಧ ಸೋಲು.

ಗ್ಲಾಸ್ ಗೋ (ಸ್ಕಾಟ್ಲೆಂಡ್), ಆಗಸ್ಟ್ 26: ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್, ಜಪಾನ್ ನಝೊಮಮಿ ಒಕುಹರಾ ವಿರುದ್ಧ 21-12, 7-21, 10-21 ಗೇಮ್ ಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.

ಶನಿವಾರ ಸಂಜೆ ನಡೆದ ಈ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, ಇಬ್ಬರು ಆಟಗಾರ್ತಿಯರು ಉತ್ತಮ ಪೈಪೋಟಿ ನೀಡಿದರು. ಇಬ್ಬರೂ ಅನುಭವಿಗಳಾಗಿದ್ದರಿಂದಾಗಿ ಇವರಿಬ್ಬರ ಪೈಪೋಟಿ ನೋಡುಗರಲ್ಲಿ ಆಸಕ್ತಿಯನ್ನು ಕೆರಳಿಸಿತ್ತು.

ಪಂದ್ಯದ ಮೊದಲ ಸೆಟ್ ನಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಸೈನಾ, ನೋಡ ನೋಡುತ್ತಿದ್ದಂತೆ 21-12 ಅಂತರದಲ್ಲಿ ಗೆಲುವು ಸಾಧಿಸಿದರು. ಆದರೆ, ದ್ವಿತೀಯ ಗೇಮ್ ನಲ್ಲಿ ಅವರು, 7-21 ಅಂತರದಲ್ಲಿ ಪರಾಭವ ಕಾಣಬೇಕಾಯಿತು.

ಇಬ್ಬರೂ ಒಂದೊಂದು ಗೇಮ್ ಗೆದ್ದ ನಂತರ, ಮೂರನೇ ಗೇಮ್ ಇಬ್ಬರ ಪಾಲಿಗೆ ನಿರ್ಣಾಯಕವಾಗಿ ಪರಿಣಮಿಸಿತು. ಮಹತ್ವವಾಗಿದ್ದ ಈ ಗೇಮ್ ನಲ್ಲಿ ಉತ್ತಮ ತಿರುಗೇಟು ನೀಡಿದ ನೊಝೊಮಿ ಅವರು, ಸೈನಾ ವಿರುದ್ಧ 10-21 ಗೇಮ್ ಅಂತರದಲ್ಲಿ ಜಯ ಸಾಧಿಸುವಲ್ಲಿ ಸಫಲರಾಗಿ ಫೈನಲ್ ಗೆ ದಾಂಗುಡಿಯಿಟ್ಟರು.

Story first published: Wednesday, January 3, 2018, 10:14 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+