ಬಾಡ್ಮಿಂಟನ್ : ಇಂಡೋನೇಷಿಯಾ ಮಾಸ್ಟರ್ಸ್ ಗೆದ್ದ ಭಾರತದ ಸೈನಾ ನೆಹ್ವಾಲ್

ಬೆಂಗಳೂರು, ಜನವರಿ 27: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ಆಟಗಾರ್ತಿ ಸೈನಾ ನೆಹ್ವಾಲ್ ಅವರು ಇಂಡೋನೇಷಿಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭಾನುವಾರದಂದು ನಡೆದ ಅಂತಿಮ ಹಣಾಹಣಿಯಲ್ಲಿ ಸೈನಾ ಅವರ ಎದುರಾಳಿ ಸ್ಪೇನಿನ ಕೆರೋಲಿನಾ ಮರಿನ್ಅವರು ಗಾಯಗೊಂಡು ನಿವೃತ್ತಗೊಂಡಿದ್ದಾರೆ.
ಫೈನಲ್ಪಂದ್ಯದ ಮೊದಲ ಗೇಮ್ನಲ್ಲಿ ಮರಿನ್ 10-4ರ ಮುನ್ನಡೆಯಲ್ಲಿದ್ದರು. ಆದರೆ, ಬಲಪಾದದ ಸ್ನಾಯುಸೆಳೆತಕ್ಕೆ ಒಳಗಾಗಿ, ಪಂದ್ಯವನ್ನು ಬಿಟ್ಟು ಹೊರ ನಡೆಯಬೇಕಾಯಿತು. ಮಲೇಷಿಯಾ ಮಾಸ್ಟರ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ಅವರನ್ನು ಮರಿನ್ ಸೋಲಿಸಿದ್ದರು.
ಫೈನಲ್ ಗೂ ಮುನ್ನ ಉಪಾಂತ್ಯ ಪಂದ್ಯದಲ್ಲಿ 28 ವರ್ಷದ ಸೈನಾ ನೆಹ್ವಾಲ್ ಅವರು 18-21, 21-12, 21-18 ಅಂತರದಲ್ಲಿ ಚೀನಾದ ಹೀ ಬಿಂಗ್ಜಿಯಾವೋರನ್ನು ಸೋಲಿಸಿ, ಫೈನಲ್ ಹಂತ ತಲುಪಿದ್ದರು. 6ನೇ ಶ್ರೇಯಾಂಕದ ಬಿಂಗ್ಜಿಯಾವೊ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಫೈನಲ್ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಹಾಗೂ ಹಾಲಿ ಒಲಿಂಪಿಕ್ ಚಾಂಪಿಯನ್ ಮರಿನ್ ಅವರು ಮೇಲುಗೈ ಸಾಧಿಸುವ ನಿರೀಕ್ಷೆಯಿತ್ತು. ಆದರೆ, ಗಾಯಗೊಂಡು ನಿವೃತ್ತರಾಗಿದ್ದರಿಂದ ಸೈನಾಗೆ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷ ಇಂಡೋನೇಷಿಯಾ ಮಾಸ್ಟರ್ಸ್ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಸೈನಾ ಅವರು ಚೈನೀಸ್ ತೈಪೆಯ ತಾಯಿ ಜು ಯಿಂಗ್ ವಿರುದ್ಧ 9-21, 13-21 ರಲ್ಲಿ ಸೋಲು ಕಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications