ಜಪಾನ್ ಓಪನ್ 2022: ಕ್ವಾರ್ಟರ್ ಫೈನಲ್ ತಲುಪಿದ HS ಪ್ರಣೋಯ್, ಕಿಡಂಬಿ ಶ್ರೀಕಾಂತ್ ಔಟ್

ಭಾರತದ ಪ್ರಮುಖ ಸ್ಟಾರ್ ಷಟ್ಲರ್‌ಗಳಲ್ಲಿ ಒಬ್ಬರಾದ HS ಪ್ರಣೋಯ್ ಅವರು ಜಪಾನ್ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ನಲ್ಲಿ ಪ್ರಣೋಯ್ ಮಾಜಿ ವಿಶ್ವ ಚಾಂಪಿಯನ್ ಲೋ ಕೀನ್ ಯು (ಸಿಂಗಪುರ) ಅವರನ್ನು 22-20, 21-19 ಗೇಮ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟರು. 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣಯ್ ಪ್ರಾಬಲ್ಯ ಮೆರೆದರು.
ಮೊದಲ ಸುತ್ತಿನಲ್ಲಿ ಮಲೇಷ್ಯಾದ ಆಂಗಸ್ ಅವರನ್ನು ಮಣಿಸಿದ್ದ ಪ್ರಣೋಯ್, ಪ್ರೀಕ್ವಾರ್ಟರ್ ನಲ್ಲೂ ಅದೇ ವೇಗವನ್ನು ಮುಂದುವರಿಸಿದರು. ಕೀನ್ ಯೂ ಎರಡೂ ಸುತ್ತುಗಳಲ್ಲಿ ಕಠಿಣ ಪೈಪೋಟಿ ನೀಡಿದರು. ಆದರೂ ಏಕಾಗ್ರತೆ ಕಳೆದುಕೊಳ್ಳದೆ ಆಡಿದ ಪ್ರಣಯ್ ಗೆಲುವಿನ ದಡ ತಲುಪಿದರು. ಕೀನ್ ಯು ವಿರುದ್ಧ ಕಳೆದ ನಾಲ್ಕು ಪಂದ್ಯಗಳಲ್ಲಿ ಪ್ರಣೋಯ್ಗೆ ಇದು ಮೂರನೇ ಗೆಲುವು ಎಂಬುದು ಗಮನಾರ್ಹ. ಪ್ರಣೋಯ್ ಮುಂದಿನ ಸುತ್ತಿನಲ್ಲಿ ತೈಪೆ ಶಟ್ಲರ್ ಚೌ ಟೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದು ಪ್ರೀ ಕ್ವಾರ್ಟರ್ ಕದನದಲ್ಲಿ ಭಾರತದ ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಹೋರಾಟ ಅಂತ್ಯಗೊಂಡಿದೆ. ಬುಧವಾರ ವಿಶ್ವದ 5ನೇ ಶ್ರೇಯಾಂಕದ ಮಲೇಷ್ಯಾದ ಲೀ ಝಿ ಜಿಯಾ ಅವರಿಗೆ ಆಘಾತ ನೀಡಿದ ಶ್ರೀಕಾಂತ್, ಎರಡನೇ ಸುತ್ತಿನಲ್ಲಿ ಅವರು ಜಪಾನ್‌ನ ಸ್ಥಳೀಯ ಆಟಗಾರರಿಂದ ಸೋಲನ್ನ ಅನುಭವಿಸಿದರು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್ 10-21, 16-21ರಲ್ಲಿ ಶ್ರೇಯಾಂಕ ರಹಿತ ಆಟಗಾರ ಕಾಂತಾ ತ್ಸುನೇಯಮಾ ವಿರುದ್ಧ ಸೋತರು.
ಇದರ ಹೊರತಾಗಿಯೂ ಭಾರತದ ಸ್ಟಾರ್ ಷಟ್ಲರ್‌ಗಳಾದ ಲಕ್ಷ್ಯ ಸೇನ್ ಮತ್ತು ಸೈನಾ ನೆಹ್ವಾಲ್ ಈಗಾಗಲೇ ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಹಿಂದೆ ಸರಿದಿರುವುದು ಗೊತ್ತೇ ಇದೆ. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್-ಕಪಿಲಾ ಜೋಡಿ, ಮಹಿಳೆಯರ ಡಬಲ್ಸ್‌ನಲ್ಲಿ ಜಾಲಿ-ಗಾಯತ್ರಿ ಗೋಪಿಚಂದ್ ಜೋಡಿ, ಮಿಶ್ರ ಡಬಲ್ಸ್‌ನಲ್ಲಿ ಪ್ರಸಾದ್-ದೇವಾಂಗನ್ ಜೋಡಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿತು. ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಗಾಯದ ಸಮಸ್ಯೆಯಿಂದ ಈ ಟೂರ್ನಿಯಿಂದ ದೂರ ಉಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications