ಡೆನ್ಮಾರ್ಕ್ ಓಪನ್: ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

ನವದೆಹಲಿ: ಕೊರೊನಾವೈರಸ್ ಕಾರಣ ಸುಮಾರು ಏಳು ತಿಂಗಳ ಕಾಲ ಬಿಡುವಿನಲ್ಲಿದ್ದ ಭಾರತದ ಸ್ಟಾರ್ ಶಟ್ಲರ್ ಕಿದಂಬಿ ಶ್ರೀಕಾಂತ್ ಮತ್ತೆ ಬ್ಯಾಡ್ಮಿಂಟನ್ ಅಂಕಣಕ್ಕೆ ಇಳಿದಿದ್ದಾರೆ. ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ (ಅಕ್ಟೋಬರ್ 15) ನಡೆದ ಡೆನ್ಮಾರ್ಕ್ ಓಪನ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಅವರು ಕೆನಡಾ ಆಟಗಾರ ಜೇಸನ್ ಅಂಥೋನಿ ಹೋ ಶುಯೆ ಅವರನ್ನು ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಐದನೇ ಶ್ರೇಯಾಂಕಿತ ಕಿದಂಬಿ ಶ್ರೀಕಾಂತ್ ಮತ್ತು ಜೇಸನ್ ಅಂಥೋನಿ ಮಧ್ಯೆ ಸುಮಾರು 33 ನಿಮಿಷಗಳ ಕಾದಾಟ ನಡೆಯಿತು. ಅಂತಿಮವಾಗಿ ಶ್ರೀಕಾಂತ್ 21-15 21-14ರ ಅಂತರದಿಂದ ಮೇಲುಗೈ ಸಾಧಿಸಿದರು. ಇದು ಬ್ಯಾಡ್ಮಿಂಟನ್ ಕಾಲೆಂಡರ್‌ನಲ್ಲಿ ನಡೆಯುತ್ತಿರುವ ಏಕಮಾತ್ರ ಟೂರ್ನಿ.
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಸುಮಾರು 5-6 ತಿಂಗಳ ಅಂತರದಲ್ಲಿ ಅನೇಕ ಟೂರ್ನಿಗಳನ್ನು ಹಮ್ಮಿಕೊಂಡಿತ್ತಾದರೂ ಕೊರೊನಾ ವೈರಸ್ ಕಾಟದಿಂದಾಗಿ ಬಹುತೇಕ ಟೂರ್ನಿಗಳು ರದ್ದಾಗಿವೆ.
Story first published: Friday, October 16, 2020, 10:11 [IST]
Other articles published on Oct 16, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications