ಶ್ರೀಕಾಂತ್‌ಗೆ ಗಾಯ, ಥೈಲ್ಯಾಂಡ್ ಓಪನ್‌ನಲ್ಲಿ ಭಾರತದ ಸ್ಪರ್ಧೆ ಕೊನೆ

ಬ್ಯಾಂಕಾಕ್: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 2021ರ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಪರ್ಧೆ ಕೊನೆಗೊಂಡಿದೆ. ಭಾರತದ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ಮತ್ತು ಡಬಲ್ಸ್ ತಂಡಗಳು ಸೋತು ಹೊರ ಬೀಳುವುದರೊಂದಿಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್‌ನ ಸೂಪರ್ 1000ನಲ್ಲಿ ಭಾರತ ಸ್ಪರ್ಧೆ ಮುಗಿಸಿದೆ.
ಸೈನಾ ನೆಹ್ವಾಲ್ ಅವರು ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಥೈಲ್ಯಾಂಡ್‌ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ವಿರುದ್ಧ 23-21, 14-21, 16-21ರ ಸೋಲಿನೊಂದಿಗೆ ಪಂದ್ಯಾಟದಿಂದ ಹೊರಬಿದ್ದಿದ್ದರೆ, ಕಿದಂಬಿ ಶ್ರೀಕಾಂತ್ ಅವರು ಕಾಲಿನ ಹಿಂಭಾಗ ಸ್ನಾಯು ಬೇನೆಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
'ಕಾಲಿನ ಸ್ನಾಯುವಿನ ಒತ್ತಡದಿಂದಾಗಿ ಥೈಲ್ಯಾಂಡ್ ಓಪನ್‌ನಿಂದ ಹೊರಬರಲು ನನಗೆ ಸೂಚಿಸಲಾಗಿದೆ ಎಂದು ನಿಮಗೆಲ್ಲರಿಗೂ ತಿಳಿಸಲು ತುಂಬಾ ದುಃಖವಾಗಿದೆ. ಮುಂದಿನ ಥೈಲ್ಯಾಂಡ್ ಲೆಗ್‌ಗೆ ಮುಂದಿನ ವಾರದಲ್ಲಿ ನಾನು ಫಿಟ್ ಆಗಲಿದ್ದೇನೆ,' ಎಂದು ಶ್ರೀಕಾಂತ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಕಾಂತ್ ಒಂದು ವೇಳೆ ಮುಂದಿನ ಐದು ದಿನಗಳಲ್ಲಿ ಫಿಟ್ ಆದರೆ ದ್ವಿತೀಯ ತಾಣದಲ್ಲಿ ನಡೆಯುವ ಟೂರ್ನಿಯಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications