For Quick Alerts
ALLOW NOTIFICATIONS  
For Daily Alerts

Korea Open 2023 Final: ಇಂಡೋನೇಷ್ಯಾ ಜೋಡಿ ಸೋಲಿಸಿ ಡಬಲ್ಸ್ ಪ್ರಶಸ್ತಿ ಗೆದ್ದ ಚಿರಾಗ್-ಸಾತ್ವಿಕ್ ಜೋಡಿ

ಭಾನುವಾರ, ಜುಲೈ 23ರಂದು ನಡೆದ ಪ್ರತಿಷ್ಠಿತ 2023ರ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆದ್ದು ಚಾಂಪಿಯನ್ ಆದರು.

ದಕ್ಷಿಣ ಕೊರಿಯಾದ ಯೊಸುವಿನ ಜಿನ್ನಮ್ ಸ್ಟೇಡಿಯಂನಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಜೋಡಿಯನ್ನು 17-21, 21-13, 21-14 ಅಂತರದಲ್ಲಿ ಸೋಲಿಸುವ ಮೂಲಕ ಚಿರಾಗ್-ಸಾತ್ವಿಕ್ ಜೋಡಿ ಪುರುಷರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

Korea Open 2023 Final: Chirag-Satwik Duo Beat Indonesia Pair To Win Doubles Title

ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಜೋಡಿಗೆ ಫೈನಲ್ ಪಂದ್ಯದವರೆಗಿನ ಪಯಣ ಸುಲಭವಾಗಿರಲಿಲ್ಲ. ಸೆಮಿಫೈನಲ್‌ನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಚೀನಾದ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಜೋಡಿ ವಿರುದ್ಧ ರೋಮಾಂಚನಕಾರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು.

ಭಾರತೀಯ ಜೋಡಿ 21-15, 24-22 ಅಂತರದಲ್ಲಿ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಮೂರು ಬಾರಿಯ ಮುಖಾಮುಖಿಯಲ್ಲಿ ಚೀನಾದ ಜೋಡಿಯ ವಿರುದ್ಧ ಭಾರತೀಯ ಜೋಡಿ ಮೊದಲ ಬಾರಿಗೆ ಜಯ ಸಾಧಿಸಿದರು.

ಇನ್ನು 2023ರ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವದ ಅಗ್ರ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯನ್ನು ಎದುರಿಸಿದರು. ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಭಾರತದ ಜೋಡಿ ಸತತ ಐದು ಪಾಯಿಂಟ್‌ಗಳನ್ನು ಗಳಿಸಿದ ನಂತರ ಮೇಲುಗೈ ಸಾಧಿಸಿತು.

Korea Open 2023 Final: Chirag-Satwik Duo Beat Indonesia Pair To Win Doubles Title

ಎರಡನೇ ಗೇಮ್‌ನಲ್ಲಿ ಎದುರಾಳಿಯಿಂದ ತೀವ್ರ ಪ್ರತಿರೋಧವನ್ನು ಎದುರಿಸಿದ ಹೊರತಾಗಿಯೂ, ಭಾರತದ ಜೋಡಿಯು ನಿರ್ಣಾಯಕ ಹಂತದಲ್ಲಿ ಆಕ್ರಮಣಕಾರಿಯಾಗುವಲ್ಲಿ ಯಶಸ್ವಿಯಾದರು ಮತ್ತು ಸ್ಪರ್ಧೆಯನ್ನು 40 ನಿಮಿಷಗಳಲ್ಲಿ ಮುಗಿಸಿದರು.

2023ರ BWF ವರ್ಲ್ಡ್ ಟೂರ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಈಗಾಗಲೇ ಸ್ವಿಸ್ ಮತ್ತು ಇಂಡೋನೇಷ್ಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಇದೀಗ ಈ ಗೆಲುವು ಅವರ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದೆ.

2023ರ ಕೊರಿಯಾ ಓಪನ್ ಫಲಿತಾಂಶವು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಟಗಾರರ ಅರ್ಹತಾ ಶ್ರೇಯಾಂಕಗಳ ಕಡೆಗೆ ಈ ಗೆಲುವು ಇನ್ನಷ್ಟು ನಿರ್ಣಾಯಕವಾಗಿದೆ.

2023ರ ಕೊರಿಯಾ ಓಪನ್ ಜುಲೈ 18ರಿಂದ 23ರವರೆಗೆ ನಡೆದಿದ್ದು, ಇದು 2023ರ BWF ವರ್ಲ್ಡ್ ಟೂರ್‌ನ ಐದನೇ ಸೂಪರ್ 500 ಪಂದ್ಯಾವಳಿಯಾಗಿದೆ.

BWFನ ಅನುಮತಿಯೊಂದಿಗೆ ಬ್ಯಾಡ್ಮಿಂಟನ್ ಕೊರಿಯಾ ಅಸೋಸಿಯೇಷನ್ ​​ಆಯೋಜಿಸಿದ ಪಂದ್ಯಾವಳಿಯು ಒಟ್ಟು 420,000 ಯುಎಸ್ ಡಾಲರ್ ಬಹುಮಾನವನ್ನು ಹೊಂದಿತ್ತು. ಇದೀಗ ಪುರುಷರ ಡಬಲ್ಸ್ ವಿಜೇತರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 33,180 ಯುಎಸ್ ಡಾಲರ್ ಬಹುಮಾನದ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ.

Story first published: Sunday, July 23, 2023, 18:15 [IST]
Other articles published on Jul 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+