ಕೊರಿಯಾ ಓಪನ್ 2018: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್

ಸಿಯೋಲ್, ಸೆಪ್ಟೆಂಬರ್ 27: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.
ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ ಅವರು ಸೆಪ್ಟೆಂಬರ್ 27ರ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ ಅವರನ್ನು 21-18, 21-18ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇಬ್ಬರ ಮಧ್ಯೆ 36 ನಿಮಿಷಗಳ ಕಾದಾಟ ನಡೆಯಿತು.
ಕ್ವಾರ್ಟರ್ ಫೈನಲ್ ನಲ್ಲಿ ಸೈನಾ ಅವರು ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ಸವಾಲು ಸ್ವೀಕರಿಸಲಿದ್ದಾರೆ. ಸದ್ಯ ವಿಶ್ವ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನದಲ್ಲಿರುವ ಸೈನಾ, ಡಿಸೆಂಬರ್ 16ರಂದು ಭಾರತದ ಬ್ಯಾಡ್ಮಿಂಟನ್ ಆಟಗಾರ ಪಾರುಪಳ್ಳಿ ಕಶ್ಯಪ್ ಅವರೊಂದಿಗೆ ಸಪ್ತಪದಿ ತುಳಿಯುವುದರಲ್ಲಿದ್ದಾರೆ.
ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಅವರೊಂದಿಗೆ ತರಬೇತಿ ಪಡೆಯುತ್ತಿರುವ ಸೈನಾ ಮತ್ತು ಕಶ್ಯಪ್ ನೈಜ ಜೀವನದ 'ಮಿಶ್ರ ಡಬಲ್ಸ್' ಜೋಡಿ ಅನ್ನಿಸಿಕೊಳ್ಳಲಿದ್ದಾರೆ. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಸೈನಾ ಬಂಗಾರ ಗೆದ್ದಿದ್ದರು. ತಾನು ಚಿನ್ನ ಗೆದ್ದಿದ್ದಕ್ಕೆ ಕಶ್ಯಪ್ ತುಂಬಿದ ಸ್ಫೂರ್ತಿ ಕಾರಣ ಎಂದು ಸೈನಾ ಹೇಳಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications