ಲೀ ಚಾಂಗ್ ವೀಗೆ ಐತಿಹಾಸಿಕ 12ನೇ ಮಲೇಷ್ಯಾ ಓಪನ್ ಪ್ರಶಸ್ತಿ

ಕೌಲಾಲಂಪುರ, ಜು. 1: ರವಿವಾರ ನಡೆದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಅನುಭವಿ ಆಟಗಾರ ಲೀ ಚಾಂಗ್ ವೀ ಅವರು ಜಪಾನ್ ನ ಯುವ ಆಟಗಾರ ಕೆಂಟೊ ಮೊಮೊಟಾ ಅವರನ್ನು ಮಣಿಸಿ ಐತಿಹಾಸಿಕ 12ನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡರು.
ತವರು ನೆಲದಲ್ಲೇ ನಡೆದ ಪಂದ್ಯದಲ್ಲಿ ಲೀ ಚಾಂಗ್ ಅಪೂರ್ವ ಆಟ ಪ್ರದರ್ಶಿಸಿದರು. ಜಪಾನ್ ಆಟಗಾರ ಮೊಮೊಟಾ ಅವರನ್ನು 21-17, 23-21ರ ಅಂತರದಿಂದ ಸೋಲಿಸಿದರು. 35ರ ಹರೆಯದ ಲೀ ಮತ್ತು 23ರ ಹರೆಯದ ಮೊಮೊಟಾ ಮಧ್ಯೆ 71 ನಿಮಿಷಗಳ ಕಾದಾಟ ನಡೆಯಿತು.
ಪಂದ್ಯದ ಬಳಿಕ ಖುಷಿ ಹಂಚಿಕೊಂಡ ಲೀ, 'ಇಂದಿಗೆ ನಾನು 12ನೇ ಮಲೇಷ್ಯಾ ಪನ್ ಪ್ರಶಸ್ತಿ ಜಯಸಿದ್ದೇನೆ. ಇದು ಮುಂಬರಲಿರುವ ವರ್ಲ್ಡ್ ಚಾಂಪಿಯನ್ ಶಿಪ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ಇನ್ನಷ್ಟು ಹುರುಪು ನೀಡಿದೆ' ಎಂದಿದ್ದಾರೆ.
ವನಿತಾ ವಿಭಾಗ ಸಿಂಗಲ್ಸ್ ಫೈನಲ್ ನಲ್ಲಿ ಅಗ್ರ ಶ್ರೇಯಾಂಕಿತ ತೈವಾನ್ ಆಟಗಾರ್ತಿ ತೈ ಝು ಯಿಂಗ್ ಅವರು ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 22-20, 21-11ರ ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಬಾಚಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications