Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಬಿಎಲ್ 2018: ಹೈದರಾಬಾದ್‌ಗೆ 3ನೇ ಗೆಲುವು ತಂದ ಸಿಂಧು, ಕ್ಯಾಲ್ಜೌಲ್

PBL: Sindhu, Caljouw take Hyderabad Hunters to top of standings

ಪುಣೆ, ಜನವರಿ 2: ಹೊಸ ವರ್ಷವನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಪುಣೆಯ ಶ್ರೀ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ (ಜನವರಿ 1) ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಸಿಂಧು, ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಎದುರು ಜಯ ಸಾಧಿಸಿದ್ದಾರೆ.

ಸಿಂಗಲ್ಸ್‌ ವಿಭಾಗದ ಸ್ಪರ್ಧೆಯಲ್ಲಿ ಹೈದರಾಬಾದ್ ಪ್ರತಿನಿಧಿಸಿದ್ದ ಸಿಂಧು, ಸೈನಾ ಅವರನ್ನು 11-15, 15-9, 15-5ರ ಅಂತರದಿಂದ ಸೋಲಿಸಿದರು. ಮೊಣಕಾಲು ಗಾಯದ ಕಾರಣ ನಾರ್ತ್ ಈಸ್ಟರ್ನ್ ವಾರಿಯರ್ಸ್‌ನ ಆರಂಭಿಕ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಸೈನಾ ಈಗಲೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಆಟದ ವೇಳೆ ಪರದಾಡಿದ್ದು ಕಂಡುಬಂತು.

ಮತ್ತೊಂದು ಮುಖಾಮುಖಿಯಲ್ಲಿ ಹೈದರಾಬಾದ್ ಹಂಟರ್ಸ್ ಪ್ರತಿನಿಧಿಸಿದ್ದ ಮಾರ್ಕ್ ಕಾಲ್ಜೌವ್ ಅವರು ನಾರ್ತ್ ಈಸ್ಟರ್ನ್ ವಾರಿಯರ್ಸ್‌ನ ಟಿಯಾನ್ ಹೂವಿ ಅವರನ್ನು ಹಿಮ್ಮೆಟ್ಟಿಸಿದರು. ಅಂತೂ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್‌ಗೆ ಮೂರನೇ ಗೆಲುವು ಲಭಿಸಿದಂತಾಗಿದೆ.

Story first published: Thursday, January 3, 2019, 20:32 [IST]
Other articles published on Jan 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+