For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಕನ್ನಡಿಗ ಪ್ರಕಾಶ್ ಪಡುಕೋಣೆ

Prakash Padukone Indias 1st number 1 ranked Shuttler, his Life story and achievements

ಪ್ರಸ್ತುತ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದೆ. ಅನೇಕ ಪ್ರತಿಭಾವಂತ ಆಟಗಾರರು ಭಾರತವನ್ನು ಪ್ರತಿನಿಧಿಸುತ್ತಿದ್ದು ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ ಲೋಕದಲ್ಲಿ ಭಾರತ ಮಿಂಚುವಂತೆ ಮಾಡುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅನೇಕ ದಶಕಗಳಿಂದ ಅತ್ಯುನ್ನತ ಸಾಧನೆ ಮಾಡಿಕೊಂಡು ಬರುತ್ತಿದ್ದು ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ವಿಶೇಷ ಸ್ಥಾನ ದೊರೆಯುವಂತೆ ಮಾಡಿದ ಕೆಲ ಶ್ರೇಷ್ಠ ಆಟಗಾರರಿದ್ದಾರೆ. ಆ ಪೈಕಿ ಕನ್ನಡಿಗ ಪ್ರಕಾಶ ಪಡುಕೋಣೆ ಅಗ್ರಗಣ್ಯರು.

ಬ್ಯಾಡ್ಮಿಂಡನ್ ಕ್ರೀಡೆಯಲ್ಲಿ ಭಾರತದ ಪರವಾಗಿ ಶ್ರೇಷ್ಠ ಸಾಧನೆ ಮಾಡುವ ಮೂಲಕ ವಿಶ್ವದ ನಂಬರ್ 1 ಸ್ಥಾನವನ್ನು ಅಲಂಕರಿಸಿದ ಭಾರತದ ಮೊದಲ ಆಟಗಾರ ಕನ್ನಡಿಗ ಪ್ರಕಾಶ್ ಪಡುಕೋಣೆ. ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ ಪೈಕಿ ಪ್ರಮುಖ ಹೆಸರಾಗಿರುವ ಪ್ರಕಾಶ್ ಪಡುಕೋಣೆ ಭಾರತದಲ್ಲಿ ಬ್ಯಾಡ್ಮಿಂಟನ್ ಹೆಚ್ಚು ಖ್ಯಾತವಾಗಲು ವಿಶೇಷ ಕೊಡುಗೆಯನ್ನು ನೀಡಿದ್ದಾರೆ.

ತಂದೆಯಿಂದಾಗಿ ಬ್ಯಾಡ್ಮಿಂಟನ್ ಮೇಲೆ ಆಸಕ್ತಿ

ಪ್ರಕಾಶ್ ಪಡುಕೋಣೆ ಹುಟ್ಟಿದ್ದು 1955 ಜೂನ್ 10ರಂದು. ಪ್ರಕಾಶ್ ಪಡುಕೋಣೆ ಅವರ ತಂದೆ ರಮೇಶ್ ಪಡುಕೋಣೆ ಮೈಸೂರು ಬ್ಯಾಡ್ಮಿಂಟನ್ ಅಸೊಸಿಯೇಶನ್‌ನ ಕಾರ್ಯದರ್ಶಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿದ್ದರು. ತಂದೆಯಿಂದಾಗಿ ಸಹಜವಾಗಿಯೇ ಪ್ರಕಾಶ್ ಬ್ಯಾಡ್ಮಿಂಟನ್ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ನಂತರ ಈ ಕ್ರೀಡೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದರು ಪ್ರಕಾಶ್ ಪಡುಕೋಣೆ. 1962ರಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ಅಧಿಕೃತವಾಗಿ ವೃತ್ತಿಪರ ಬ್ಯಾಡ್ಮಿಂಟನ್‌ಗೆ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಹಿಂದಿರುಗಿ ನೋಡಲೇ ಇಲ್ಲ.

ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಸಾಧನೆ

ಜೂನಿಯರ್ ಮಟ್ಟದಲ್ಲಿ ಖ್ಯಾತಿಗಳಿಸುತ್ತಾ ಸಾಗಿದ ಪ್ರಕಾಶ್ ಪಡುಕೋಣೆ 1971ರಲ್ಲಿ ತಮ್ಮ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಆಕ್ರಮಣಕಾರಿಯಾಗಿಸಿದರು. 1972ರಲ್ಲಿ ಅಖಿಲ ಭಾರತ ಜೂನಿಯರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅದೇ ವರ್ಷ ಹಿರಿಯರ ಪ್ರಶಸ್ತಿಯನ್ನು ಕೂಡ ಪಡುಕೋಣೆ ಮುಡಿಗೇರಿಸಿಕೊಂಡರು. ತಮ್ಮ 16ನೇ ವಯಸ್ಸಿನಲ್ಲಿ ಈ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿ ಅತ್ಯಂತ ಕಿರಿಯ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ಅದಾದ ಬಳಿಕ ಮುಂದಿನ ಏಳು ವರ್ಷಗಳ ಕಾಲ ಪ್ರಕಾಶ್ ಪಡುಕೋಣೆ ಸತತವಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 1978ರಲ್ಲಿ ಪ್ರಕಾಶ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. 1978ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಶ್ರೇಷ್ಠ ಸಾಧನೆ ಮಾಡಿದ್ದರು.

ಅದಾದ ಬಳಿಕ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಾಶ್ ಪಡುಕೋಣೆ ಗೆದ್ದುಕೊಂಡಿದ್ದಾರೆ. 1980ರಲ್ಲಿ ಪ್ರಕಾಶ್ ಪಡುಕೋಣೆ ಡ್ಯಾನಿಶ್ ಓಪನ್, ಸ್ವೀಡಿಷ್ ಓಪನ್ ಗೆದ್ದುಕೊಂಡರು. ಬಳಿಕ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಈ ಕನ್ನಡಿಗ ಪಾತ್ರವಾಗಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿನ ಗೆಲುವು ಪ್ರಕಾಶ್ ಪಡುಕೋಣೆ ಅವರನ್ನು ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಏರಿಸಿತು. ಈ ಮೂಲಕ ಈ ಶ್ರೇಷ್ಠ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು ಪ್ರಕಾಶ್ ಪಡುಕೋಣೆ.

ನಿವೃತ್ತಿ ಮತ್ತು ಪ್ರಶಸ್ತಿ

ನಿವೃತ್ತಿ ಮತ್ತು ಪ್ರಶಸ್ತಿ

ಪ್ರಕಾಶ್ ಪಡುಕೋಣೆ 1989ರಲ್ಲಿ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಪಡೆದುಕೊಂಡರು. ಬಳಿಕವೂ ಬ್ಯಾಡ್ಮಿಂನ್‌ಗೆ ತಮ್ಮ ಕೊಡುಗೆಯನ್ನು ನೀಡುವ ಸಲುವಾಗಿ 1994 ರಲ್ಲಿ ಸಹ ರಾಷ್ಟ್ರೀಯ ಚಾಂಪಿಯನ್ ವಿಮಲ್ ಕುಮಾರ್ ಅವರೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಸ್ಥಾಪಿಸಿದರು. ದೇಶದ ಖ್ಯಾತ ಬ್ಯಾಡ್ಮಿಂಟನ್ ಆಟಗಾರರಾದ ಪುಲ್ಲೇಲ ಗೋಪಿಚಂದ್ ಮತ್ತು ಅಪರ್ಣಾ ಪೋಪಟ್ ಅವರಂತಾ ಆಟಗಾರರು ಇದೇ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್‌ನಲ್ಲಿ ತರಬೇತು ಪಡೆದ ಆಟಗಾರರು ಎಂಬುದು ಗಮನಾರ್ಹ ಸಂಗತಿ.

ಇನ್ನು ಪ್ರಕಾಶ್ ಪಡುಕೋಣೆ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ನೀಡಿದ ವಿಶೇಷ ಸಾಧನೆಗಾಗಿ ಭಾರತ ಸರ್ಕಾರ 1982ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಕಾಶ್ ಪಡುಕೋಣೆ ಬೆಂಗಳೂರಿನಲ್ಲಿ ಪತ್ನಿ ಉಜ್ವಲಾ ಅವರೊಂದಿಗೆ ನಿವೃತ್ತ ಜೀವನವನ್ನು ನಡೆಸುತ್ತಿದ್ದು ಬ್ಯಾಡ್ಮಿಂಟನ್ ಅಕಾಡೆಮಿ ಮೂಲಕ ಯುವ ಪೀಳಿಗೆಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಪ್ರಕಾಶ್ ಪಡುಕೋಣೆ ಅವರಿಗೆ ಇಬ್ಬರು ಪುತ್ರಿಯರಿದ್ದು ಮೊದಲ ಪುತ್ರಿ ದೀಪಿಕಾ ಪಡುಕೋಣೆ ಚಲನಚಿತ್ರ ಕ್ಷೇತ್ರದಲ್ಲಿ ಮಿಂಚುತ್ತಿದ್ದರೆ ಮತ್ತೋರ್ವ ಪುತ್ರಿ ಅನಿಶಾ ಪಡುಕೋಣೆ ವೃತ್ತಿಪರ ಗಾಲ್ಫರ್ ಆಗಿ ಸಾಧನೆ ಮಾಡುತ್ತಿದ್ದಾರೆ.

Story first published: Thursday, November 3, 2022, 21:52 [IST]
Other articles published on Nov 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+