India Open: ಬ್ಲಿಚ್ಫೆಲ್ಟ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

ನವದೆಹಲಿ, ಮಾರ್ಚ್ 30: ನವದೆಹಲಿಯ ಕೆಡಿ ಜಾಧವ್ ಇಂಡೋರ್ ಹಾಲ್‌ನಲ್ಲಿ ನಡೆಯುತ್ತಿರುವ ಯೋನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಕರ್ಷಣೀಯ ಆಟಗಾರ್ತಿ ಪಿವಿ ಸಿಂಧು ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ಕೂಡ ಸೆಮಿಫೈನಲ್‌ಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸಿಂಧು, ಡೆನ್ಮಾರ್ಕ್ ಆಟಗಾರ್ತಿ ಮಿಯಾ ಬ್ಲಿಚ್ಫೆಲ್ಟ್ ವಿರುದ್ಧ 21-19, 22-20ರ ಗೆಲುವು ದಾಖಲಿಸಿದರು. ಮುಂದಿನ ಪಂದ್ಯದಲ್ಲಿ ಸಿಂಧು ಅವರು ಚೀನಾದ ಹಿ ಬಿಂಗ್ಜಿಯಾವೊ ಸವಾಲು ಸ್ವೀಕರಿಸಲಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್, ಭಾರತದವರೇ ಆದ ಬಿ ಸಾಯ್ ಪ್ರಣೀತ್ ವಿರುದ್ಧ 21-23, 21-11, 21-19ರ ಜಯ ಸಾಧಿಸಿದರು. ಇಬ್ಬರ ಮಧ್ಯೆ ರೋಚಕ ಕಾಳಗ ನಡೆಯಿತಾದರೂ ಶ್ರೀಕಾಂತ್ ಅಂತಿಮವಾಗಿ ಮೇಲುಗೈ ಸಾಧಿಸಿದರು.
Story first published: Saturday, March 30, 2019, 18:26 [IST]
Other articles published on Mar 30, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications