Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬ್ಯಾಡ್ಮಿಂಟನ್‌ನಲ್ಲೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಪಿವಿ ಸಿಂಧು!

PV Sindhu, Indias badminton star, signs a deal worth Rs 50 crores

ನವದೆಹಲಿ, ಫೆಬ್ರವರಿ 9: ವಿಶ್ವ ಬ್ಯಾಡ್ಮಿಂಟನ್‌ ಇತಿಹಾಸದಲ್ಲೇ ಅತೀ ದೊಡ್ಡದು ಎನಿಸುವ ಒಪ್ಪಂದವೊಂದಕ್ಕೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಡಗಾರ್ತಿ ಪಿವಿ ಸಿಂಧು ಸಹಿ ಹಾಕಿದ್ದಾರೆ. ಚೀನಾದ ಬಹುದೊಡ್ಡ ಕ್ರೀಡಾ ಕಂಪನಿಯ ಪ್ರಾಯೋಜಕತ್ವವನ್ನು ಸಿಂಧು ಪಡೆದುಕೊಂಡಿದ್ದಾರೆ.

ಚೈನೀಸ್ ಸ್ಪೋರ್ಟ್ಸ್ ಬ್ರ್ಯಾಂಡ್ ಆದ 'ಲಿ ನಿಂಗ್' ಜೊತೆ ಸಿಂಧು ಸುಮಾರು 50 ಕೋಟಿ ರೂ.ನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. 4 ವರ್ಷಗಳ ಕಾಲಾವಧಿಯನ್ನು ಒಳಗೊಂಡಿರುವ ಈ ಒಪ್ಪಂದ ವಿಶ್ವ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಅತೀ ದೊಡ್ಡ ಮಟ್ಟದ ಪ್ರಾಯೋಜಕತ್ವ ಒಪ್ಪಂದವಾಗಿ ಗುರುತಿಸಿಕೊಂಡಿದೆ.

ಭಾರತದ ಮತ್ತೊಬ್ಬ ಬ್ಯಾಡ್ಮಿಂಟನ್ ಸ್ಟಾರ್ ಕಿದಂಬಿ ಶ್ರೀಕಾಂತ್ ಅವರು ಇದೇ ಕಂಪನಿಯಿಂದ ಕಳೆದ ವರ್ಷ 35 ಕೋ.ರೂ.ಗಾಗಿ 4 ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ಸಿಂಧು ಈಗ ಅದಕ್ಕೂ ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಸನ್‌ಲೈಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಮಹೇಂದರ್ ಕಪೂರ್ ಈ ಬಗ್ಗೆ ಮಾತನಾಡಿ, 'ಈ ಒಪ್ಪಂದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯವರು ಮಾಡಿಕೊಂಡಿರುವ 100 ಕೋಟಿ ರೂ. ಒಪ್ಪಂದಕ್ಕೆ ಸಮೀಪದಲ್ಲಿದೆ. ಸಿಂಧು 40 ಕೋ.ರೂ. ಪ್ರಾಯೋಜಕತ್ವವನ್ನು ಪಡೆಯಲಿದ್ದಾರೆ. ಇನ್ನುಳಿದ ಹಣ ಕ್ರೀಡಾ ಸಲಕರಣೆಗಳ ರೂಪದಲ್ಲಿ ಪಡೆಯಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

Story first published: Saturday, February 9, 2019, 13:45 [IST]
Other articles published on Feb 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+