Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಟೂರ್ 2018 ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದ ಪಿವಿ ಸಿಂಧು

PV Sindhu makes history, claims her maiden BWF World Tour Finals!

ಬೆಂಗಳೂರು, ಡಿಸೆಂಬರ್ 16: ಭಾರತದ ಹೆಮ್ಮೆಯ ಬಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ಚೀನಾದಲ್ಲಿ ನಡೆಯುತ್ತಿರುವ ಟೂರ್ 2018 ಫೈನಲ್ ನಲ್ಲಿ ಗೆಲ್ಲುವ ಮೂಲಕ ಭಾನುವಾರ(ಡಿಸೆಂಬರ್ 16)ದಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದು ಪಿವಿ ಸಿಂಧು ಅವರ ಚೊಚ್ಚಲ BWF ವಿಶ್ವ ಟೂರ್ ಪ್ರಶಸ್ತಿಯಾಗಿದೆ. ಅಂತಿಮ ಹಣಾಹಣಿಯಲ್ಲಿ ಜಪಾನ್ನಿನ ನೊಜೊಮಿ ಒಕುಹರಾ ಅವರನ್ನು 21-19, 21-17ರಲ್ಲಿ ಸೋಲಿಸಿ, ಪ್ರಶಸ್ತಿ ಗೆದ್ದರು.

ಸೆಮಿಫೈನಲ್ ನಲ್ಲಿ ಥೈಲ್ಯಾಂಡ್ ನ ರಾಚ್ತಾನೋಕ್ ಇಂಟನಾನ್ ಅವರನ್ನು 21-16, 25-23ರಲ್ಲಿ ರೋಚಕವಾಗಿ ಸೋಲಿಸಿದ್ದರು.

ಇಲ್ಲಿ ತನಕ ಮೂರು ಬಾರಿ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 23ವರ್ಷ ವಯಸ್ಸಿನ ಪಿವಿ ಸಿಂಧು ಈ ಬಾರಿ 1.5 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಪ್ರಶಸ್ತಿಯನ್ನು ಗಳಿಸಿದ್ದಾರೆ.

Story first published: Sunday, December 16, 2018, 12:26 [IST]
Other articles published on Dec 16, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+