Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಕುಸಿತ ಕಂಡ ಸಿಂಧು, ಸೈನಾ

ನವದೆಹಲಿ, ಮೇ 05 : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ರಿಯೋ ಒಲಿಂಪಿಕ್ಸ್ ನ ಬೆಳ್ಳಿ ವಿಜೇತೆ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ.

ಸಿಂಧು ಹಾಗೂ ಸೈನಾ ಕ್ರಮವಾಗಿ ನಾಲ್ಕು ಮತ್ತು ಒಂಬತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಇಬ್ಬರೂ ಆಟಗಾರ್ತಿಯರು ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡು ಹೊರಬಿದ್ದಿದ್ದರು.[ಭಾರತದ ಬೆಳ್ಳಿ ತಾರೆ ಪಿವಿ ಸಿಂಧು ಪ್ರಶಸ್ತಿ ಕನಸು ಭಗ್ನ!]

PV Sindhu, Saina Nehwal lose a place in World Badminton rankings

13ನೇ ಸ್ಥಾನದಲ್ಲಿ ಇರುವ ಅಜಯ್ ಜಯರಾಮ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅಗ್ರಗಣ್ಯ ಆಟಗಾರನಾಗಿ ಮುಂದುವರಿದಿದ್ದಾರೆ. ಸಿಂಗಪುರ ಓಪನ್ ಸೂಪರ್ ಸರಣಿ ಪ್ರಶಸ್ತಿ ಗೆದ್ದುಕೊಂಡಿರುವ ಸಾಯಿ ಪ್ರಣೀತ್ ಒಂದು ಸ್ಥಾನ ಮೇಲಕ್ಕೇರುವ ಮೂಲಕ 22ನೇ ಶ್ರೇಯಾಂಕದಲ್ಲಿದ್ದಾರೆ.

ಸಿಂಗಪುರ ಓಪನ್‌ ಫೈನಲ್‌ನಲ್ಲಿ ಸಾಯಿ ಪ್ರಣೀತ್ ಎದುರು ಸೋಲು ಕಂಡು ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದ ಕೆ. ಶ್ರೀಕಾಂತ್‌ 26ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

PV Sindhu, Saina Nehwal lose a place in World Badminton rankings

ಸೈಯದ್ ಮೋದಿ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ಸಮೀರ್ ವರ್ಮಾ ಒಂದು ಸ್ಥಾನ ಬಡ್ತಿ ಹೊಂದುವ ಮೂಲಕ 27ನೇ ಸ್ಥಾನ ಪಡೆದಿದ್ದಾರೆ. ಒಂದು ಸ್ಥಾನ ಹಿಂಬಡ್ತಿ ಪಡೆದ ಎಚ್‌.ಎಸ್.ಪ್ರಣಯ್ 30ನೇ ಸ್ಥಾನದಲ್ಲಿದ್ದಾರೆ. ಸೌರಭ್ ವರ್ಮಾ 39ನೇ ಸ್ಥಾನ ಗಳಿಸಿದ್ದಾರೆ.

ಮಹಿಳೆಯರ ಡಬಲ್ಸ್ ವಿಭಾಗದ ಶ್ರೇಯಾಂಕದಲ್ಲಿ ವೇಗವಾಗಿ ಬಡ್ತಿ ಪಡೆಯುತ್ತಿರುವ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಎರಡು ಸ್ಥಾನ ಏರಿಕೆ ಕಂಡು 28ನೇ ಸ್ಥಾನದಲ್ಲಿದೆ.

ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ 25ನೇ ಸ್ಥಾನದಲ್ಲಿದೆ. ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ 16ನೇ ಸ್ಥಾನದಲ್ಲಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+