For Quick Alerts
ALLOW NOTIFICATIONS  
For Daily Alerts

Badminton: ಸೈಯದ್ ಮೋದಿ ಬ್ಯಾಡ್ಮಿಂಟನ್‌ ಟೂರ್ನಿ ಫೈನಲ್‌ ತಲುಪಿದ ಪಿವಿ ಸಿಂಧು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಸೈಯದ್ ಮೋದಿ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇನ್ನು ಮಿಶ್ರ ಡಬಲ್ಸ್‌ನಲ್ಲೂ ಭಾರತದ ಜೋಡಿ ಅಮೋಘ ಆಟವನ್ನು ಪ್ರದರ್ಶಿಸಿದ್ದು, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಆಡಿ, ಅರ್ಹ ಜಯ ದಾಖಲಿಸಿದರು.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ಉಪಾಂತ್ಯ ಪಂದ್ಯದಲ್ಲಿ ಸಿಂಧು 21-12, 21-09 ರಿಂದ ಭಾರತದವರೇ ಆದ ಉನ್ನತಿ ಹೂಡಾರನ್ನು ಎರಡು ನೇರ ಸೆಟ್‌ಗಳಲ್ಲಿ ಮಣಿಸಿದರು. ಇವರು ಕೇವಲ 36 ನಿಮಿಷದ ಆಟದಲ್ಲಿ ಫೈನಲ್‌ಗೆ ಟಿಕೆಟ್‌ ಪಡೆದರು. ಈ ಮೂಲಕ ಸಿಂಧು ಪ್ರಸಕ್ತ ವರ್ಷದ ಕೊನೆಯಲ್ಲಿ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.

PV Sindhu Shines Reaches Syed Modi Championship Final Indian Mixed Doubles Pair Also Advances

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿರುವ ಸಿಂಧು, ಭಾರತದ ಯುವ ಶಟ್ಲರ್ ಸವಾಲನ್ನು ಮೆಟ್ಟಿನಿಂತರು. ಇವರಿಗೆ ಮೊದಲ ಗೇಮ್‌ನ, ಫಸ್ಟ್‌ ಹಾಫ್‌ನಲ್ಲಿ ಉನ್ನತಿ ಕೊಂಚ ಪ್ರತಿ ರೋಧವನ್ನು ಒಡ್ಡಿದರು. ಈ ಅವಧಿಯಲ್ಲಿ ಸ್ಕೋರ್‌ 9-8ರಿಂದ ಕೂಡಿತ್ತು. ಆಗ ಸಿಂಧು ಮನಮೋಹಕ ಆಟವನ್ನು ಪ್ರದರ್ಶಿಸಿ ಗೆಲುವು ದಾಖಲಿಸಿದರು. ಎರಡನೇ ಗೇಮ್‌ನಲ್ಲೂ ಸಿಂಧು ಅಮೋಘ ಆಟದ ಪ್ರದರ್ಶನ ನೀಡಿ ಸತತ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಪರಿಣಾಮ ಉನ್ನತಿ ಪುಟಿದೇಳುವ ಆಸೆ ಮಣ್ಣು ಪಾಲಾಯಿತು.

ಸಿಂಧು ಫೈನಲ್‌ ಪಂದ್ಯದಲ್ಲಿ ಚೀನಾ ಆಟಗಾರ್ತಿಯ ಸವಾಲು ಎದುರಿಸಲಿದ್ದಾರೆ. ಚೀನಾ ಆಟಗಾರ್ತಿ ವು ಲು ಯು 21-19, 21-12 ರಿಂದ ಥೈವಾನ್ ಆಟಗಾರ್ತಿ ವಿರುದ್ಧ 41 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಜಯ ಸಾಧಿಸಿದರು.

ಭಾರತ ಜೋಡಿ ಫೈನಲ್‌ಗೆ

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಜೋಡಿಯಾದ ಧ್ರುವ ಕಪಿಲ, ತನಿಶಾ ಕ್ರಾಸ್ಟೊ 21-16, 21-15 ರಿಂದ ಚೀನಾ ಆಟಗಾರ್ತಿಯ ವಿರುದ್ಧ 42 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿ, ಪ್ರಶಸ್ತಿ ಸುತ್ತಿನ ಕಾದಟಕ್ಕೆ ಅರ್ಹತೆ ಪಡೆದಿದೆ.

Story first published: Saturday, November 30, 2024, 16:31 [IST]
Other articles published on Nov 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+