China Masters 2025: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಚೀನಾ ಮಾಸ್ಟರ್ 2025 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದ್ದಾರೆ. ಇವರು ಪ್ರಿ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ತಮಗಿಂತ ಹೆಚ್ಚಿನ ಶ್ರೇಯಾಂಕಿತೆ ಆಟಗಾರ್ತಿಯನ್ನು ಮಣಿಸಿ ಮುನ್ನಡೆ ಸಾಧಿಸಿದರು.
ಶೆನ್ಜೆನ್ ಅರೆನಾದಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. ಇವರು 21-15, 21-15 ರಿಂದ ಥಾಯ್ಲೆಂಡ್ ಪೋರ್ನ್‌ಪವೀ ಚೋಚುವಾಂಗ್ ವಿರುದ್ಧ 41 ನಿಮಿಷಗಳ ಜಯ ಸಾಧಿಸಿದರು. ಈ ಮೂಲಕ ಏಕಪಕ್ಷೀಯ ಜಯ ಸಾಧಿಸಿದ್ದಾರೆ.

ಮೊದಲ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಈ ವೇಳೆ ಅಂಕಗಳನ್ನು ಇಬ್ಬರೂ ಆಟಗಾರ್ತಿಯರು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಮೊದಲಾವಧಿಯ ಆಟದಲ್ಲಿ ಥಾಯ್ಲೆಂಡ್ ಆಟಗಾರ್ತಿ ಅಂಕಗಳನ್ನು ಕಲೆ ಹಾಕಲು ಹಿನ್ನಡೆ ಅನುಭವಿಸಿದರು. ಈ ಅವಧಿಯಲ್ಲಿ ಸಿಂಧು ಸ್ನ್ಯಾಷ್ ಹಾಗೂ ಗ್ಯಾಪ್ ಶಾಟ್‌ಗಳ ಮೂಲಕ ಗಮನ ಸೆಳೆದರು. ಮೊದಲಾವಧಿಯ ಬಳಿಕ ಸಿಂಧು ತಮ್ಮ ಆಟದಲ್ಲಿ ಚುರುಕುತನ ಕಂಡುಕೊಂಡರು. ಪರಿಣಾಮ ಸುಲಭ ಜಯ ಸಾಧಿಸಿದರು.
ಅಬ್ಬರಿಸಿದ ಸಿಂಧು
ಎರಡನೇ ಅವಧಿಯಲ್ಲಿ ಸಿಂಧು ಅಮೋಘ ಆಟದ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಈ ಅವಧಿಯಲ್ಲಿ ಸಿಂಧು, ಥಾಯ್ಲೆಂಡ್ ಆಟಗಾರ್ತಿಯ ಸವಾಲನ್ನು ಮೀರಿ ನಿಂತರು. ಅಲ್ಲದೆ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದರು. ಈ ವೇಳೆ ಸಿಂಧು ಆಟಕ್ಕೆ ಪೋರ್ನ್‌ಪವೀ ಬ್ರೇಕ್ ಹಾಕುವಲ್ಲಿ ವಿಫಲರಾದರು. ಈ ಗೇಮ್‌ನಲ್ಲೂ ಜಯ ಸಾಧಿಸಿ ಮುನ್ನಡೆ ಸಾಧಿಸಿದರು. ಥಾಯ್ಲೆಂಡ್ ಆಟಗಾರ್ತಿಯ ವಿರುದ್ಧ 6ನೇ ಜಯ ದಾಖಲಿಸಿದರು.ಸಿಂಧು ಎಂಟರ ಘಟ್ಟದ ಪಂದ್ಯದಲ್ಲಿ ಕೋರಿಯಾದ ಎಎನ್ ಸೆ ಯಂಗ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಭಾರತದ ಜೋಡಿ ಆರ್ಭಟ
ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ರಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಗರುವಾರ ಸ್ಥಿರ ಪ್ರದರ್ಶನ ನೀಡಿದ್ದು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ. ಇವರು 16ರ ಘಟ್ಟದ ಪಂದ್ಯದಲ್ಲಿ ಭಾರತದ ಜೋಡಿ 21-13, 21-12 ರಿಂದ ಚೈನೀಸ್ ತೈಪೇಯ ಹ್ಸಿಯಾಂಗ್ ಚೀಹ್, ವಾಂಗ್ ಚಿ-ಲಿನ್ ವಿರುದ್ಧ 33 ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು. ಈ ಪಂದ್ಯದಲ್ಲಿ ಭಾರತೀಯ ಆಟಗಾರರ ಸವಾಲು ಮೀರಿ ನಿಲ್ಲುವಲ್ಲಿ ಚೈನೀಸ್ ತೈಪೇಯ ಆಟಗಾರರು ವಿಫಲರಾದರು.
ಭಾರತದ ಜೋಡಿ ಆರಂಭದಿಂದಲೂ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಅಲ್ಲದೆ ಮೊದಲಸಲದಲ್ಲೇ ಸತತ 6 ಅಂಕಗಳನ್ನು ಕಲೆ ಹಾಕಿ ಮಿಂಚಿತು. ಈ ಪಂದ್ಯದ ಯಾವುದೇ ಹಂತದಲ್ಲೂ ಥೈಪೇಯ ಆಟಗಾರರು ಅಂಕಗಳಿಕೆಯಲ್ಲಿ ಚುರುಕುತನ ಪ್ರದರ್ಶಿಸಲಿಲ್ಲ. ಪರಿಣಾಮ ಭಾರತದ ಜೋಡಿ ಸುಲಭವಾಗಿ ಪಂದ್ಯವನ್ನು ಗೆದ್ದಿತು. ಎರಡನೇ ಗೇಮ್‌ನಲ್ಲೂ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಸ್ಥಿರ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications