ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಮೂಡಿಸಿದ ಶ್ರೀಕಾಂತ್
ರಿಯೋ ಡಿ ಜನೈರೋ ಆಗಸ್ಟ್, 17: ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಕಂಡಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚೀನಾದ ಲಿನ್ ಡನ್ ವಿರುದ್ಧ ಪರಾಭವಗೊಂಡು ಪದಕದ ಆಸೆ ಹುಸಿಗೊಳಿಸಿದ್ದಾರೆ.
ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ
ಬುಧವಾರ(ಆ.17) ರಂದು ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಲಂಡನ್ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡನ್ ವಿರುದ್ಧ 6-21, 21-11, 18-21 ಅಂತರದಲ್ಲಿ ಪರಾಭವಗೊಂಡರು.

ಆರಂಭದ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಎರಡನೇ ಸೆಟ್ ನಲ್ಲಿ 21-11 ಅಂತರದಲ್ಲಿ ಗೆದ್ದು ಎದುರಾಳಿಗೆ ತಿರುಗೇಟು ನೀಡಿದರು. ಇದರಿಂದ ತಲಾ ಒಂದೊಂದು ಸೆಟ್ ಜಯಗಳಿಸಿ ಸಮಬಲ ಸಾಧಿಸಿದರು.
ಆದರೆ, ಅಂತಿಮ ಸೆಟ್ ನಲ್ಲಿ ಶ್ರೀಕಾಂತ್ ತೀವ್ರ ಪೈಪೋಟಿ ನಡೆಸಿದರಾದರೂ ಕೊನೆಯಲ್ಲಿ 18-21 ಅಂತರದಲ್ಲಿ ಸೋಲು ಅನುಭವಿಸಿದರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Srikanth loses quarterfinals to Lin Dan
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications