ಸೀನಿಯರ್ ನ್ಯಾಷನಲ್ಸ್: ಸೈನಾ, ಕಶ್ಯಪ್, ಸೌರಭ್ ಸೆಮಿಫೈನಲ್‌ಗೆ ಪ್ರವೇಶ

ಗುವಾಹಟಿ, ಫೆಬ್ರವರಿ 15: ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್, ಪಾರುಪಳ್ಳಿ ಕಶ್ಯಪ್ ಮತ್ತು ಸೌರಭ್ ವರ್ಮಾ ಅವರು ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 83ನೇ ಯೋನೆಕ್ಸ್ ಸನ್ ರೈಸ್ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಮಹಿಳಾ ಕ್ವಾರ್ಟರ್ ಫೈನಲ್ಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಭಾರತದ ಮಾಜಿ ನಂ.1 ಆಟಗಾರ್ತಿ ನೇಹಾ ಪಂಡಿತ್ ಅವರನ್ನು 21-10, 21-10ರಿಂದ ಸೋಲಿಸಿದರು. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಸೈನಾ ಮುಂದಿನ ಪಂದ್ಯದಲ್ಲಿ ನಾಗ್ಪುರ್ ಆಟಗಾರ್ತಿ ವೈಷ್ಣವಿ ಭಾಲೆ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ 2012ರ ವಿನ್ನರ್ ಕಶ್ಯಪ್, ಬೋಧಿತ್ ಜೋಷಿ ವಿರುದ್ಧ 21-18, 21-16ರ ನೇರ ಸೆಟ್ ಗೆಲುವು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ವಿಶ್ವ ನಂ.30ನೇ ಆಟಗಾರ ಸೌರಭ್ ಅವರು ಬಿ ಸಾಯ್ ಪ್ರಣೀತ್ ವಿರುದ್ಧ 21-11, 21-23, 21-18ರ ಜಯ ಸಾಧಿಸುವುದರೊಂದಿಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications