ಕಶ್ಯಪ್ ಜತೆ ಮದುವೆ ಸುದ್ದಿ ಖಚಿತಪಡಿಸಿದ ಸೈನಾ ನೆಹ್ವಾಲ್

ಹೈದರಾಬಾದ್, ಅಕ್ಟೋಬರ್ 08 : ಭಾರತದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಪರುಪಳ್ಳಿ ಕಶ್ಯಪ್ ಅವರನ್ನು ವರಿಸುತ್ತಿರುವುದಾಗಿ ಇಂದು ಘೋಷಿಸಿದರು.
ಬಾಡ್ಮಿಂಟನ್ ಆಟಗಾರ ಪಿ ಕಶ್ಯಪ್(32) ಹಾಗೂ ಸೈನಾ(28) ಇಬ್ಬರು ಡೇಟಿಂಗ್ ನಲ್ಲಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ಕಾಲದಿಂದ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಇಬ್ಬರು ಪ್ರತಿಕ್ರಿಯಿಸಿರಲಿಲ್ಲ.
ಇದೇ ಮೊದಲ ಬಾರಿಗೆ ಸೈನಾ ತನ್ನ ಸಂಬಂಧದ ಕುರಿತು ಮಾತನಾಡಿದ್ದು, ಮದುವೆಯ ದಿನಾಂಕವನ್ನು ಸಹ ಘೋಷಿಸಿದ್ದಾರೆ. ಬಾಡ್ಮಿಂಟನ್ ತಾರಾ ಜೋಡಿ ಈ ವರ್ಷ ಡಿಸೆಂಬರ್ 16 ರಂದು ಮದುವೆಯಾಗಲಿದ್ದಾರೆ.
2005 ರಿಂದ ಗೋಪಿಚಂದ್ ಅಕಾಡೆಮಿಯಲ್ಲಿ ಸೈನಾ ತರಬೇತಿ ಪಡೆದಿದ್ದಾರೆ. ಆದರೆ, ನಮ್ಮಿಬ್ಬರ ನಡುವಿನ ಸ್ನೇಹವು 2007ರಲ್ಲಿ ಬೆಳೆಯಿತು. ಅಲ್ಲಿಂದೀಚೆಗೆ ನಾವು ಪಂದ್ಯಾವಳಿಯಲ್ಲಿ ಒಟ್ಟಾಗಿ ಪ್ರಯಾಣಿಸಲು ಪ್ರಾರಂಭಿಸಿದ್ದೇವೆ.
ನಾವು ಹಲವಾರು ಟೂರ್ನಮೆಂಟ್ ಗಳಲ್ಲಿ ಒಟ್ಟಿಗೆ ತರಬೇತಿ ಹೊಂದಿದ್ದೇವೆ. ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿ ಎನಿಸಿ ಮದುವೆಯಾಗಲು ನಿರ್ಧರಿಸಿದೆವು. ಆದ್ರೆ, ವೃತ್ತಿಜೀವನದ ಆಯ್ಕೆಯ ಕಾರಣ ಮದುವೆಯನ್ನು ಮುಂದೂಡಿದ್ದೆವು ಎಂದು ಸೈನಾ ಹೇಳಿದ್ದಾರೆ.
ಈ ವರ್ಷ ಡಿಸೆಂಬರ್ 16 ರಂದು ಮದುವೆಯಾಗುವುದಕ್ಕೆ ಹಿಂದಿನ ಕಾರಣವೆಂದರೆ, ನಾವು ಡಿಸೆಂಬರ್ 20 ರ ನಂತರ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ನಿರತರಾಗಿರುತ್ತೇವೆ. ಟೋಕಿಯೋ ಒಲಿಂಪಿಕ್ಸ್ ನಂತರ ಅರ್ಹತೆ ಪಡೆದಿದ್ದು, ಇದಕ್ಕಾಗಿ ತಯಾರಿ ನಡೆಸಬೇಕಿದೆ ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications